ಬೆಂಗಳೂರು : ಸ್ವರ್ಣಭೂಮಿ ಫೌಂಡೇಷನ್ ಕೋಲಾರ ಮತ್ತು ಅಕ್ಕರೆಯ ಬೆಳಕು ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಮತ್ತು ತರಬೇತಿ ಕೇಂದ್ರ ಇವರ ವತಿಯಿಂದ ಹಾಗೂ ಸುಪ್ರೀಂ ವಿಕಲಚೇತನದ ಸೇವಾ ಸಂಸ್ಥೆ ಕೋಲಾರ ಇವರ ಸಹಕಾರದೊಂದಿಗೆ ಅರ್ಪಿಸುವ 5ನೇ ವರ್ಷದ ‘ವಚನ ವೈಭವ’ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 19 ಏಪ್ರಿಲ್ 2026ರಂದು ಮಧ್ಯಾಹ್ನ 2-30 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆ ಪಂಪ ಮಹಾಕವಿ ರಸ್ತೆ, ಮಕ್ಕಳಕೂಟ ಹತ್ತಿರ, ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ವಚನ ವೈಭವ ಕಾರ್ಯಕ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಬಸವ ಸೇವಾ ರತ್ನ ಪ್ರಶಸ್ತಿ, ಕನ್ನಡ ಕಣ್ಮಣಿ ರಾಜರತ್ನ ಡಾ. ಪುನೀತ್ ರಾಜಕುಮಾರ್ ಸ್ಟಾರ್ ಐಕಾನ್ ಅವಾರ್ಡ್ಸ್ ಮತ್ತು ವಿವಿಧ ಕ್ಷೇತ್ರದ ಅಪ್ರತಿಮ ಸಾಧನೆ ತೋರಿದ ಮಕ್ಕಳಿಗೆ ‘ಭರವಸೆಯ ಬೆಳಕು ಪ್ರಶಸ್ತಿ’ ಪ್ರದಾನ ಸಭಾರಂಭ ನಡೆಯಲಿದೆ.

