ಬೆಂಗಳೂರು : ‘ಬೆನಕ’ ಇದರ ಸುವರ್ಣ ಸಂಭ್ರಮ ಹಾಗೂ ಬಿ.ವಿ. ಕಾರಂತ 97ರ ಪ್ರಯುಕ್ತ ಪ್ರಸ್ತುತ ಪಡಿಸುವ ‘ನಂಗ್ಯಾಕೋ DOUಟು’ ನಿಮ್ಮನೆ ಕಥೆ ನಾಟಕ ಪ್ರದರ್ಶನವನ್ನು ದಿನಾಂಕ 18 ಏಪ್ರಿಲ್ 2026ರಂದು ಮಧ್ಯಾಹ್ನ 3-30 ಮತ್ತು ಸಂಜೆ 7-30 ಗಂಟೆಗೆ ಬೆಂಗಳೂರು ಜೆ.ಪಿ. ನಗರದಲ್ಲಿರುವ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಟಿ.ಎಸ್. ನಾಗಾಭರಣ ಇವರ ಸಾರಥ್ಯದಲ್ಲಿ 26ನೇ ಮತ್ತು 27ನೇ ಪ್ರಯೋಗ ಇದಾಗಿದ್ದು, ಬಿ.ಆರ್. ಲಕ್ಷ್ಮಣ ರಾವ್ ರಂಗರೂಪ, ಗಜಾನನ ಟಿ. ನಾಯ್ಕ ಇವರು ಸಂಗೀತ ಮತ್ತು ಪ್ರಮೋದ್ ಶಿಗ್ಗಾಂವ್ ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7760604599 ಸಂಖ್ಯೆಯನ್ನು ಸಂಪರ್ಕಿಸಿರಿ.

