ಉಡುಪಿ : ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕಥೋಲಿಕ್ ಸಭಾ ಉಡುಪಿ ಪ್ರದೇಶ ಸಂಯುಕ್ತಾಶ್ರಯದಲ್ಲಿ ನೀಡಲಾಗುವ ರಾಜ್ಯ ಮಟ್ಟದ ‘ಫಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ’ಕ್ಕೆ ಕೆಥೋಲಿಕ್ ಕೊಂಕಣಿ ಕ್ರೈಸ್ತರಿಂದ 2025ರ ಜನವರಿಯಿಂದ ಡಿಸೆಂಬರ್‌ವರೆಗೆ ಪ್ರಕಟಿತ ಕನ್ನಡ ಭಾಷಾ ಕೃತಿಗಳನ್ನು ಆಹ್ವಾನಿಸಲಾಗಿದೆ.
ಧಾರ್ಮಿಕ, ವೈಚಾರಿಕ, ವೈಜ್ಞಾನಿಕ, ಐತಿಹಾಸಿಕ, ಸಮಾಜಶಾಸ್ತ್ರ, ಜಾನಪದ ಅಧ್ಯಯನ, ಜೀವನ ಚರಿತ್ರೆ, ವ್ಯಕ್ತಿಚಿತ್ರ, ಸಂಪಾದಿತ ಕೃತಿಗಳ ಸಂಗ್ರಹ, ಕೊಂಕಣಿಯಿಂದ ಭಾಷಾಂತರಿತ ಕೃತಿಗಳು, ಕಥಾ ಸಂಗ್ರಹ, ಕಾದಂಬರಿ, ಕಾವ್ಯ ಸಂಗ್ರಹ, ನಾಟಕ, ಕಿರುನಾಟಕ ಸಂಗ್ರಹ ಇತ್ಯಾದಿಗಳನ್ನು ಪ್ರಶಸ್ತಿಗಾಗಿ ಕಳಿಸಬಹುದು. ಮುದ್ರಿತ ಕೃತಿಗಳ 4 ಪ್ರತಿಗಳನ್ನು ದಿನಾಂಕ 31 ಮಾರ್ಚ್ 2026ರೊಳಗೆ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ 90359 96144ನ್ನು ಸಂಪರ್ಕಿಸಲು ತಿಳಿಸಿದೆ.
