ಮಂಗಳೂರು : ಕೋಡಿಕಲ್ ನ ವಿಪ್ರ ವೇದಿಕೆಯ ದಶಮಾನೋತ್ಸವ ಸಂಭ್ರಮ ಸರಣಿಯ ದಶಮ ಕಾರ್ಯಕ್ರಮವು ದಿನಾಂಕ 09 ಮಾರ್ಚ್ 2026ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸವಿತ್ತ ಖ್ಯಾತ ಹರಿದಾಸರಾದ ಚಂದ್ರಕಾಂತ ಭಟ್ ಅಶ್ವಥಪುರರವರು “ಕಲಿಯುಗದ ಪರಮ ವೀರ ಮಂತ್ರವೇ ದೇವರನ್ನು ಒಲಿಸಿಕೊಳ್ಳುವ ದಾರಿ ಹರಿಕಥಾ ಸಂಕೀರ್ತನೆಯೇ ಆಗಿದೆ. ಈಗಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಸಜ್ಜನರು ಹೆಚ್ಚು ಹೆಚ್ಚು ಗೊಂದಲಗಳಿಂದ ಪಾರಾಗಲು ದೇವಭಕ್ತಿಯನ್ನು ವೃದ್ಧಿಗೊಳಿಸಿದ್ದಾರೆ. ಈ ಮೂಲಕ ನಾವೂ ದೇವರ ಮಹಿಮೆಯನ್ನು ವಿವರಿಸುತ್ತಾ ಮಂದಿಗಳು ಭಕ್ತಿ ಪ್ರವಾಹದೊಂದಿಗೇ ಸಾಗಲು ಪ್ರೇರೇಪಿಸುತ್ತೇವೆ. ಕಥೆ – ಉಪಕಥೆಗಳು ಜೀವನ ಪಥವನ್ನು ಬೇಕಾದಂತೆ ಬದಲಾಯಿಸಿಕೊಳ್ಳಲು ಅನುಕೂಲಿಸುತ್ತದೆ” ಎಂದು ಹೇಳಿದರು
ವಿದ್ಯಾಗಣೇಶ್ ರಾವ್ ಇವರು ಸ್ವಾಗತಿಸಿ, ನೈನಾ ಹರೀಶ್ ರಾವ್ರವರು ಕಲಾವಿದರನ್ನು ಪರಿಚಯಿಸಿದರು. ದುರ್ಗಾದಾಸ್ ಕಟೀಲ್ ರವರು ನಿರ್ವಹಿಸಿದರು. ಸಂಸ್ಥಾಪಕರಲ್ಲೋರ್ವರಾದ ವಿಶ್ವ ಕುಮಾರ್ ಜೋಯಿಸ್, ಹಿರಿಯರಾದ ಜಯರಾಮ ಪದಕಣ್ಣಾಯ, ಪ್ರಭಾವತಿ ಮಡಿ ಹಾಗೂ ವೇದಿಕೆಯ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಿಶೋರ್ ಕೃಷ್ಣರವರು ಧನ್ಯವಾದವಿತ್ತರು. ಹರೀಶ್ ರಾವ್ ಬಾಳ, ಕೆ. ಗಿರೀಶ್ ರವರು ಕಲಾ ಗೌರವವನ್ನು ನಡೆಸಿಕೊಟ್ಟರು. ಬಳಿಕ ಚಂದ್ರಕಾಂತ ಭಟ್ ಇವರಿಂದ ‘ಭಕ್ತ ಭೀಷ್ಮ’ ಎಂಬ ಕಥಾ ಕಾಲಕ್ಷೇಪ ನಡೆಯಿತು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ರಮೇಶ ಹೆಬ್ಬಾರ್ ಹಾಗೂ ತಬಲಾದಲ್ಲಿ ಪ್ರದೀಪ ಉಪಾಧ್ಯಾಯ ಸಹಕರಿಸಿದರು.
