Subscribe to Updates

    Get the latest creative news from FooBar about art, design and business.

    What's Hot

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೇಸಿಗೆ ಕವಿಗೋಷ್ಠಿ

    April 30, 2026

    ಕನ್ನಡ ಸಾಹಿತ್ಯ ಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ರಂಗಾಭಿನಯ ಕಾರ್ಯಾಗಾರ’

    April 30, 2026

    ಯಕ್ಷಗಾನ ಕಲಾವಿದ ಮಳಲಿ ಶೀನಯ್ಯ ನಿಧನ

    April 29, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮಹಿಳೆಯರಿಂದ ಪ್ರಸ್ತುತಗೊಂಡ ‘ಸುರ್ ಸಂಭ್ರಮ 2026’ ಸಂಗೀತ ಕಾರ್ಯಕ್ರಮ
    Music

    ಮಹಿಳೆಯರಿಂದ ಪ್ರಸ್ತುತಗೊಂಡ ‘ಸುರ್ ಸಂಭ್ರಮ 2026’ ಸಂಗೀತ ಕಾರ್ಯಕ್ರಮ

    March 10, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಂದ ‘ಸುರ್ ಸಂಭ್ರಮ 2026’ ಸಂಗೀತ ಕಾರ್ಯಕ್ರಮವು ದಿನಾಂಕ 08 ಮಾರ್ಚ್ 2026ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣ್ನಲ್ಲಿ ಜರಗಿತು.

    ಈ ಕಾರ್ಯಕ್ರಮವನ್ನು ಗುಮಟೆ ಬಾರಿಸಿ, ಉದ್ಘಾಟನೆ ನೆರವೇರಿಸಿದ ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು.ಟಿ. ಖಾದರ್ ಮಾತನಾಡಿದ “ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಬಹಳಷ್ಟು ಇದೆ. ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಆಕೆಯ ಪಾತ್ರ ಮೆಚ್ಚುವಂತಾದ್ದು. ಮದುವೆಯಾಗಿ ರಾತ್ರಿ ಬೆಳಗಾಗುವುದರೊಳಗೆ ಪರಂಪರೆ, ಸಂಸ್ಕೃತಿ, ದೇಶ ಭಾಷೆ ಬೇರೆಯಾದರೂ ಆಕೆ ಸಹಿಸಿಕೊಂಡು, ಸೈರಿಸಿಕೊಂಡು ಕುಟುಂಬ ನಡೆಸುತ್ತಾಳೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಐವತ್ತು ಶೇಕಡಾ ಇರುವ ಮಹಿಳೆಯರು ಮುಖ್ಯವಾಹಿನಿಗೆ ಬಂದರೆ ದೇಶ ಬಲಿಷ್ಟವಾಗುತ್ತದೆ. ಮಹಿಳೆಯರು ಎಲ್ಲಾ ಜವಾಬ್ದಾರಿಗಳನ್ನು ಸಲೀಸಾಗಿ ನಿರ್ವಹಿಸಬಲ್ಲರು. ಅವರು ಹೆಚ್ಚು ಹೆಚ್ಚು ರಾಜಕಾರಣಕ್ಕೆ ಬಂದರೆ ಮಾನವೀಯ ಮೌಲ್ಯಗಳಿಂದ ಕೂಡಿದ ರಾಜಕಾರಣ ನಡೆಸಬಹುದು” ಎಂದು ಹೇಳಿದರು.

    ಕೊಂಕಣಿಯಿಂದ ಕನ್ನಡಕ್ಕೆ ಅನುವಾದ ಮಾಡಿದ ‘ಕಥಾ ಪಲ್ಲವಿ’ ಮತ್ತು ‘ಕಾವ್ಯ ಪಲ್ಲವಿ’ ಸಂಕಲನಗಳನ್ನು ಬಿಡುಗಡೆ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಇವರು ಮಾತನಾಡಿ “ಭಾರತದಲ್ಲಿ 72 ಶೇಕಡಾ ಮಹಿಳೆಯರು ಕೃಷಿಯಲ್ಲಿ ತೊಡಗಿದ್ದರೂ 54 ಶೇಕಡಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 70 ವರ್ಷಗಳಾದರೂ ನಾವು ಮಹಿಳಾ ಮುಖ್ಯಮಂತ್ರಿಯನ್ನು ಪಡೆಯುವ ಭಾಗ್ಯ ಪಡೆದಿಲ್ಲ. ಈ ಎಲ್ಲಾ ಇಲ್ಲಗಳ ನಡುವೆ ಈ ವರ್ಷವೂ ಮಹಿಳಾ ದಿನಾಚರಣೆ ನಡೆಸುತ್ತಿದ್ದೇವೆ. ಇಂದಿಲ್ಲಿ ಎರಡು ಪುಸ್ತಕಗಳು ಬಿಡುಗಡೆಗೊಂಡವು. ಒಂದು ಗದ್ಯ, ಒಂದು ಪದ್ಯ. ಭಾಷಾ ಅಕಾಡೆಮಿಗಳು ಪರಸ್ಪರ ಸಹಕಾರದಿಂದ ಅನುವಾದ ಮಾಡಿದರೆ ಸಮಾಜ ಮತ್ತು ಸಾಹಿತ್ಯ ಗಟ್ಟಿಯಾಗುತ್ತದೆ. ಸಾಧ್ಯವಾದಲ್ಲಿ ಆಯ್ದ ಪಾಡ್ದನಗಳನ್ನು ಕೊಂಕಣಿಗೆ ತನ್ನಿ. ಅಕಾಡೆಮಿ ನಮ್ಮದು. ಆಡುವವರು, ಹಾಡುವವರು ನಮ್ಮವರೇ ಎಂಬ ಭಾವ ಬಂದಾಗ, ಭಾಷೆ ಉಳಿಸಬೇಕು ಎಂಬ ಎಚ್ಚರ ಬಂದಾಗ ಭಾಷೆ ಬೆಳೆಯುತ್ತದೆ, ಉಳಿಯುತ್ತದೆ” ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶಾಲೆಟ್ ಪಿಂಟೊ, ಬೆಥನಿ ಸಂಸ್ಥೆಯ ಮುಖ್ಯಸ್ಥರಾದ ಸಿ. ರೊಸ್ ಸೆಲಿನ್ ಬಿ.ಎಸ್. ಶುಭ ಹಾರೈಸಿದರು. ಅಕಾಡೆಮಿ ಅಧ್ಯಕ್ಷರಾದ ಜೊಕಿಂ ಸ್ಟ್ಯಾನಿ ಆಲ್ವಾರಿಸ್ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ರಿಜಿಸ್ಟ್ರಾರ್ ರಾಜೇಶ್ ಜಿ. ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ಅಕ್ಷತಾ ನಾಯಕ್, ಸಪ್ನಾ ಕ್ರಾಸ್ತಾ, ದಯಾನಂದ್ ಮಡ್ಕೇಕರ್ ಉಪಸ್ಥಿತರಿದ್ದರು. ಸ್ಟೀವನ್ ಕ್ವಾಡ್ರಸ್ ಧನ್ಯವಾದವನ್ನಿತ್ತರು. ನಂತರ ವಿವಿಧ ಪ್ರದೇಶಗಳ ಏಳರಿಂದ ಎಪ್ಪತ್ತು ವಯೋಮಾನದ ಸ್ತ್ರೀಯರ ತಂಡಗಳಿಂದ ಕೊಂಕಣಿ ಗಾಯನ ನಡೆಯಿತು. ರೋಶನ್ ಡಿ’ಸೋಜ ಆಂಜೆಲೋರ್ ನೇತೃತ್ವದಲ್ಲಿ ಸಂಗೀತಗಾರರು ಸಂಗೀತ ನೀಡಿದರು. ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Articleಕಾಂತಾವರ ಕನ್ನಡ ಸಂಘದ ವಾರ್ಷಿಕ ಪ್ರಶಸ್ತಿಗಳ ಘೋಷಣೆ
    Next Article ದಶಮಾನೋತ್ಸವ ಸಂಭ್ರಮ ಸರಣಿಯ ದಶಮ ಕಾರ್ಯಕ್ರಮದಲ್ಲಿ ಹರಿಕಥೆ
    roovari

    Add Comment Cancel Reply


    Related Posts

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೇಸಿಗೆ ಕವಿಗೋಷ್ಠಿ

    April 30, 2026

    ಕನ್ನಡ ಸಾಹಿತ್ಯ ಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ರಂಗಾಭಿನಯ ಕಾರ್ಯಾಗಾರ’

    April 30, 2026

    ಯಕ್ಷಗಾನ ಕಲಾವಿದ ಮಳಲಿ ಶೀನಯ್ಯ ನಿಧನ

    April 29, 2026

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಕಾಜಾಣ ನಾಟಕೋತ್ಸವ’ 2026 | ಏಪ್ರಿಲ್ 30

    April 29, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.