ಬೆಂಗಳೂರು : ಅಕ್ಷರ ಚಪ್ಪರ ಇದರ 5ನೇ ವಾರ್ಷಿಕೋತ್ಸವ ಸಂಭ್ರಮದ ಪ್ರಯುಕ್ತ ‘ಅಕ್ಷರೋತ್ಸವ’ ಕ್ಷಣ ಕ್ಷಣವೂ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ದಿನಾಂಕ 15 ಮಾರ್ಚ್ 2026ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರು ಶೇಷಾದ್ರಿಪುರಂ ಕುಮಾರ ಪಾರ್ಕ್ ಪೂರ್ವ, ಗಾಂಧಿ ಭವನದ ಕಸ್ತೂರಬಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಖ್ಯಾತ ಸಾಹಿತಿ ಬೈರಮಂಗಲ ರಾಮೇಗೌಡ ಇವರ ಅಧ್ಯಕ್ಷತೆಯಲ್ಲಿ ಸಾಹಿತಿ ಡಾ. ವಿಜಯಲಕ್ಷ್ಮಿ ಇವರು ಉದ್ಘಾಟನೆ ಮಾಡಲಿದ್ದಾರೆ. ವಿಚಾರ ಗೋಷ್ಠಿ ಮತ್ತು ಸಂವಾದ 1ರಲ್ಲಿ ‘ಯುವ ಜನತೆ ಮತ್ತು ಸಾಹಿತ್ಯ’ ಹಾಗೂ 2ರಲ್ಲಿ ‘ವರ್ತಮಾನದಲ್ಲಿ ಹೆಣ್ಣಿನ ತಲ್ಲಣಗಳು’ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ನಡೆಯಲಿದೆ. ಇದೇ ಸಂದರ್ಭದಲ್ಲಿ ‘ಗಳಗನಾಥ ಅಕ್ಷರಶ್ರೀ ಪ್ರಶಸ್ತಿ’ ಪ್ರದಾನ ಮತ್ತು ಬಹುಮಾನ ವಿತರಣೆ, ಸಾಹಿತಿ ಶ್ರೀಮತಿ ಗೊರೂರು ಪಂಕಜ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಅಶು ಕವನ ಸ್ಪರ್ಧೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನಪದ ಗೀತೆಗಳು, ಕಿರು ನಾಟಕ ಮತ್ತು ಏಕ ಪಾತ್ರಾಭಿನಯ ಪ್ರಸ್ತುತಗೊಳ್ಳಲಿದೆ.

