ಮಂಜೇಶ್ವರ : ಸಾಹಿತ್ಯ ಗಂಗಾ ಧಾರವಾಡ ಮತ್ತು ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಮಂಜೇಶ್ವರ ಇವರ ವತಿಯಿಂದ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ ಮತ್ತು ಮಹಾಶ್ವೇತಾದೇವಿ ಜನ್ಮಶತಮನೋತ್ಸವ ಕಥಾ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಚಾರಗೋಷ್ಠಿಯನ್ನು ದಿನಾಂಕ 28 ಏಪ್ರಿಲ್ 2026ರಂದು ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
2025ನೇ ಸಾಲಿನ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ ಜಾನಪದ ತಜ್ಞರಾದ ಡಾ. ಟಿ. ಗೋವಿಂದರಾಜು ಇವರ ‘ಕೃಷ್ಣಯ್ಯನ ಕೊಳಲು’ ಕಾದಂಬರಿಗೆ ಮತ್ತು ಮಹಾಶ್ವೇತಾದೇವಿ ಜನ್ಮಶತಮಾನೋತ್ಸವ ಕಥಾ ಪ್ರಶಸ್ತಿ ಕಥೆಗಾರರಾದ ಶ್ರೀ ಲಿಂಗರಾಜ ಸೊಟ್ಟಪ್ಪನವರ ಇವರ ‘ಕೆಂಪು ನದಿ’ ಕಥಾಸಂಕಲನಕ್ಕೆ ದೊರಕಿದೆ. ಪ್ರಾಂಶುಪಾಲರಾದ ಡಾ. ಮೊಹಮ್ಮದ್ ಅಲಿ ಕೆ. ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಡಾ. ನಾ. ಮೊಗಸಾಲೆಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಇವರು ಅಭಿನಂದನ ಭಾಷಣ ಮಾಡಲಿದ್ದು, ಹಿರಿಯ ಸಾಹಿತಿ ಪ್ರೊ. ಮೂಡಿತ್ತಾಯ ಪಿ.ಎನ್., ಡಾ. ಮಹೇಶ್ವರಿ ಯು., ಕನ್ನಡ ಪ್ರಾಧ್ಯಾಪಕರಾದ ಪ್ರೊ. ಶಿವ ಶಂಕರ ಪಿ. ಮತ್ತು ಯುವ ವಿಮರ್ಶಕ ಡಾ. ಸುಭಾಷ್ ಪಟ್ಟಾಜೆ ಇವರ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದೇ ದಿನ ಹಿರಿಯ ಲೇಖಕಿ ಡಾ. ಮಹೇಶ್ವರಿ ಯು. ಇವರ ಅಧ್ಯಕ್ಷತೆಯಲ್ಲಿ ಸುನಂದಾ ಬೆಳಗಾಂವಕರ ಮತ್ತು ಮಹಾಶ್ವೇತಾದೇವಿಯವರ ಸಾಹಿತ್ಯವನ್ನು ಕುರಿತ ವಿಚಾರಗೋಷ್ಠಿ ನಡೆಯಲಿದ್ದು, ಪ್ರೊ. ಶಿವಶಂಕರ ಪಿ., ಡಾ. ಸುಭಾಷ್ ಪಟ್ಟಾಜೆ, ಡಾ. ರತ್ನಾಕರ ಕುನಗೋಡು, ಶ್ರೀಮತಿ ರೇಷ್ಮಾ ಭಟ್, ಡಾ. ಪ್ರವೀಣ ಪದ್ಯಾಣ, ಶ್ರೀಮತಿ ಸೌಮ್ಯ ಪ್ರವೀಣ, ಕಲ್ಲಚ್ಚು ಮಹೇಶ ನಾಯಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

