ಮಂಗಳೂರು : ಬಿಜೈಯಲ್ಲಿರುವ ನೃತ್ಯಾಂಗನ್ ಸಂಸ್ಥೆಯು ‘ಅಂಕುರಾ’ 2ನೇ ಆವೃತ್ತಿಯ ಭರತನಾಟ್ಯ ಪ್ರದರ್ಶನವನ್ನು ದಿನಾಂಕ 26 ಜುಲೈ 2026ರಂದು ಸಾಯಂಕಾಲ 5-30 ಗಂಟೆಗೆ ಮಂಗಳೂರಿನ ಡಾನ್ ಬೋಸ್ಕೋ ಹಾಲ್‌ನಲ್ಲಿ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ವಿದುಷಿ ಮಂಜು ವಿ. ನಾಯರ್ ಇವರ ಶಿಷ್ಯೆ ವಿಷ್ಣುಪ್ರಿಯ ರಾಜೇಶ್, ವಿದುಷಿ ರಾಧಿಕಾ ಶೆಟ್ಟಿ ಇವರ ಶಿಷ್ಯೆ ಆರ್ಯ ದೀಪಕ್, ಅನ್ನಪೂರ್ಣ ರಿತೇಶ್ ಇವರ ಶಿಷ್ಯೆ ರಿದ್ಧಿ ಹರೀಶ್ ಶೆಟ್ಟಿ ಹಾಗೂ ಭುವನೇಶ್ವರಿ ರತಿನಂ ಇವರ ಶಿಷ್ಯೆ ವಂಧನಾ ಶ್ರೀನಿವಾಸ ಶರ್ಮಾ ಇವರು ಭರತನಾಟ್ಯ ಪ್ರಸ್ತುತಪಡಿಸುವರು.

