ಮಂಗಳೂರು : ಟೀಮ್ ಅಂಬುರುಹ ಮಾಲೆಮಾರ್ ಸಾದರ ಪಡಿಸುವ ಅಂಬುರುಹ ಯಕ್ಷ ಕಲಾ ಕೇಂದ್ರದ ಅಷ್ಟಮ ಸಂಭ್ರಮವು ದಿನಾಂಕ 19 ಜುಲೈ 2026ರಂದು ಮುಲ್ಲಕಾಡು ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಆವರಣದಲ್ಲಿ ನಡೆಯಲಿದೆ.
ಕಲಾ ಸಾರಥಿ ಕುಮಾರ್ ಮಾಲೆಮಾರ್ ಇವರ ಸಾರಥ್ಯದಲ್ಲಿ ಬೆಳಗ್ಗೆ ಗಂಟೆ 8-30ಕ್ಕೆ ಅಂಬುರುಹ ಕುಣಿತ ಭಜನಾ ತಂಡದ ಮಕ್ಕಳಿಂದ ಕುಣಿತ ಭಜನೆ, ಸಂಜೆ 3-00 ಗಂಟೆಗೆ ಸಂಜೀವ ಕಜೆಪದವು ಇವರ ನಿರ್ದೇಶನದಲ್ಲಿ ತಂಡದ ಮಕ್ಕಳಿಂದ ‘ಶ್ರೀ ಕೃಷ್ಣ ಲೀಲೆ’ ಯಕ್ಷಗಾನ ಪ್ರಸಂಗ ನಡೆಯಲಿದೆ.
ಸಂಜೆ ಗಂಟೆ 4-00ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಂಬುರುಹ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನ ನಡೆಯಲಿದೆ, ಹಿರಿಯ ಯಕ್ಷಗಾನ ಕಲಾವಿದ ಬೋಳಾರ ಸುಬ್ಬಯ್ಯ ಶೆಟ್ಟಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಜೆ ಗಂಟೆ 6-00ಕ್ಕೆ ಸಂಜೀವ ಕಜೆಪದವು ಇವರ ನಿರ್ದೇಶನದಲ್ಲಿ ‘ದೇವಿ ಶ್ರೀ ದೇವಿ’ ಯಕ್ಷಗಾನ ಬಯಲಾಟ ನಡೆಯಲಿದೆ.

