ಮಂಗಳೂರು : ‘ಕಲಾಭಿ’ ಥಿಯೇಟರ್ ಸಂಸ್ಥೆಯು ‘ಮಾರಿಕಾಡು’ ಹೊಸ ನಾಟಕವನ್ನು ಬೋಂದೆಲ್ ಕಲಾಗ್ರಾಮದಲ್ಲಿ ದಿನಾಂಕ 13 ಜುಲೈ 2026ರಂದು ಪ್ರದರ್ಶಿಸಿತು.
ಲೆಕ್ಕಪರಿಶೋಧಕ ಅನಂತ್ ಭಟ್ ಸಿ.ಪಿ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸ್ವಸ್ತಿಕ್ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಪ್ರಾಂಶುಪಾಲರಾದ ಮಾಲಿನಿ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ಕಲಾವಿದೆ ಜಾಯ್ ಡಿಂಪಲ್, ಮಂಗಳೂರಿನ ಲಲಿತ ಕಲಾ ಆರ್ಟ್ಸ್ ನ ಧನಪಾಲ್ ಎಚ್.ಎಸ್. ಮತ್ತು ಕಲಾಗ್ರಾಮದ ಕಾರ್ಯನಿರ್ವಾಹಕ ನಿರ್ದೇಶಕಿ ಅಶ್ವಿನಿ ಕಾಮತ್ ಶುಭಹಾರೈಸಿದರು.

ವಿಲಿಯಂ ಶೇಕ್ಸ್ ಪಿಯರ್‌ನ ‘ಮ್ಯಾಕ್‌ಬೆತ್’ ನಾಟಕದಿಂದ ಪ್ರೇರಿತಗೊಂಡು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಇವರು ರೂಪಾಂತರಿಸಿದ ‘ಮಾರಿಕಾಡು’ ನಾಟಕವನ್ನು ರೋಹಿತ್ ಎಸ್. ಬೈಕಾಡಿ ನಿರ್ದೇಶಿಸಿದ್ದಾರೆ. ‘ಆಪ್ತ ರಂಗಭೂಮಿ’ ಶೈಲಿಯಲ್ಲಿ ಪ್ರಸ್ತುತಿಗೊಂಡ ಈ ನಾಟಕ 80ಕ್ಕೂ ಹೆಚ್ಚು ಪ್ರೇಕ್ಷಕರ ಮನಮುದಗೊಳಿಸಿತು. ನಟರು ಮತ್ತು ಪ್ರೇಕ್ಷಕರ ನಡುವಿನ ಅಂತರವನ್ನು ಕಡಿಮೆಗೊಳಿಸುವ ಮೂಲಕ ಆಪ್ತ ಅನುಭವವನ್ನು ಕಟ್ಟಿಕೊಟ್ಟಿತು.

