Subscribe to Updates

    Get the latest creative news from FooBar about art, design and business.

    What's Hot

    ಚಿತ್ರ ಬುಡ್ಪಾಯೆರ್ ಜೋಕುಲು

    June 9, 2026

    ಸಂಗೀತ ಎಲ್ಲ ಧರ್ಮಗಳಿಗಿಂತ ಶ್ರೇಷ್ಟವಾದದ್ದು – ಡಾ. ಹರಿಕಿರಣ್ ಟಿ. ಬಂಗೇರ

    June 9, 2026

    ಅಧಿಕ ಮಾಸದ ಪುಣ್ಯಪರ್ವದಲ್ಲಿ ಶ್ರೀಹರಿಯ ಮಹಿಮೆಯ ತ್ರಿವಳಿ ಯಕ್ಷಗಾನ ಅಖ್ಯಾನಗಳ ಅನಾವರಣ

    June 9, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸಂಗೀತ ಎಲ್ಲ ಧರ್ಮಗಳಿಗಿಂತ ಶ್ರೇಷ್ಟವಾದದ್ದು – ಡಾ. ಹರಿಕಿರಣ್ ಟಿ. ಬಂಗೇರ
    Music

    ಸಂಗೀತ ಎಲ್ಲ ಧರ್ಮಗಳಿಗಿಂತ ಶ್ರೇಷ್ಟವಾದದ್ದು – ಡಾ. ಹರಿಕಿರಣ್ ಟಿ. ಬಂಗೇರ

    June 9, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : “ಎಲ್ಲಾ ಜಾತಿ ಮತ ಧರ್ಮಗಳಿಗಿಂತ ಶ್ರೇಷ್ಠವಾದದ್ದು ಸಂಗೀತ ಮನಸ್ಸಿನಲ್ಲಿರುವ ಸಂಕಟ, ಬೇಸರಗಳನ್ನು ನಿವಾರಿಸಲು ಸಂಗೀತವನ್ನು ಕೇಳಬೇಕು. ಒಳ್ಳೆಯ ಸಂಗೀತವನ್ನು ಕೇಳುವುದರಿಂದ ಒಂಟಿತನ ದೂರವಾಗುತ್ತದೆ. ಮಾತ್ರವಲ್ಲ ಶರೀರದ ನರನಾಡಿಗಳಲ್ಲಿ ಪ್ರವಹಿಸಿ ಚೈತನ್ಯ ತುಂಬುತ್ತದೆ” ಎಂದು ಖ್ಯಾತ ವೈದ್ಯರಾದ ಡಾ. ಹರಿಕಿರಣ್ ಟಿ. ಬಂಗೇರ ಅವರು ಹೇಳಿದರು.

    ಕಾಸರಗೋಡಿನ ಸುಪ್ರಸಿದ್ಧ ಸಾಹಿತ್ಯಕ ಸಾಂಸ್ಕೃತಿಕ, ಸಾಮಾಜಿಕ ಸಂಸ್ಥೆಯಾದ ರಂಗಚಿನ್ನಾರಿಯ ಸಂಗೀತ ಘಟಕ ಸ್ವರಚಿನ್ನಾರಿ ಮತ್ತು ಐ.ಎಂ.ಎ. ಸಂಸ್ಥೆಯ ಕೆರೋಕೆ ಘಟಕದ ಸಹಯೋಗದೊಂದಿಗೆ ದಿನಾಂಕ 07 ಮೇ 2026ರಂದು ಆದಿತ್ಯವಾರ ಐ.ಎಂ.ಎ. ಸಭಾಗೃಹದಲ್ಲಿ ಜರಗಿದ ‘ಅಂತರ್ಧ್ವನಿ -17 ವೈದ್ಯ ಧ್ವನಿ’ ಸಂಗೀತ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

    ಮಕ್ಕಳಲ್ಲಿರುವ ಸುಪ್ತವಾಗಿರುವ ಪ್ರತಿಭೆಯು ಮೊಬೈಲ್ ನೋಡುವುದರಿಂದ ಕಮರಿ ಹೋಗಬಹುದು. ಸಂಗೀತ, ನೃತ್ಯ, ನಾಟಕಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

    ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಗಾಯಕಿ, ಪ್ರಸೂತಿ ತಜ್ಞೆ ಡಾ. ಮಾಯಾ ಎಸ್. ಮಲ್ಯ ಅವರು ಕಾಸರಗೋಡಿನ ಪ್ರತಿಭೆಗಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಗಾಯಕ ಗಾಯಕಿಯರಿಗೆ ವೇದಿಕೆ ಒದಗಿಸುತ್ತಿರುವ ರಂಗಚಿನ್ನಾರಿ ತಂಡಕ್ಕೆ ಶುಭಾಶಯಗಳನ್ನು ತಿಳಿಸಿದರು.

    ‘ಕವಿ ಸಿಂಚನ’ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ, ಕವಿ ಡಾ. ಕೆ.ವಿ. ತಿರುಮಲೇಶ್ ರ ಬಗ್ಗೆ ಕಥೆಗಾರ್ತಿ, ಸೌಮ್ಯ ಪ್ರವೀಣ್ ಅವರು ಮಾತನಾಡಿ “ಸಂಗೀತದ ಜೊತೆ ಕವಿಗಳನ್ನು ಪರಿಚಯಿಸುವ ಕೆಲಸ ನಿಜಕ್ಕೂ ಶ್ಲಾಘನೀಯ. ಕವಿ ಮಹಾಶಯರು ಬರೆದ ಕವನವನ್ನು ಓದುವ ಹವ್ಯಾಸವನ್ನೂ ಗಾಯಕ ಗಾಯಕಿಯರು ಮೈಗೂಡಿಸಿಕೊಳ್ಳಬೇಕು” ಎಂದರು.

    ಅಧ್ಯಕ್ಷತೆಯನ್ನು ಖ್ಯಾತ ನೇತ್ರ ತಜ್ಞರೂ, ಸಾಮಾಜಿಕ ಧಾರ್ಮಿಕ ಮುಂದಾಳುಗಳಾದ ಡಾ. ಕೆ. ಅನಂತ ಕಾಮತ್ ವಹಿಸಿ, ಐ.ಎಂ.ಎ. ಸಂಸ್ಥೆಯ ವೈದ್ಯರ ಪ್ರತಿಭೆಗಳಿಗೂ ವೇದಿಕೆ ನಿರ್ಮಾಣವಾಗಿರೋದು ಖುಷಿ ತಂದಿದೆ. ಅಲ್ಲದೆ ಪ್ರತಿ ತಿಂಗಳೂ ಇಂತಹ ವೈವಿಧ್ಯಮಯ ಕಾರ್ಯಕ್ರಮಗಳು ಜರಗಬೇಕು ಎಂದರು.

    ರಂಗಚಿನ್ನಾರಿಯ ನಿರ್ದೇಶಕರೂ, ಅಂತರ್ಧ್ವನಿಯ ಸಂಚಾಲಕರೂ ಆಗಿರುವ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕ ಮಾತನಾಡಿ. ಸ್ವಾಗತಿಸಿದರು.

    ಉಷಾ ಟೀಚರ್ ಅವರು ಪ್ರಾರ್ಥನೆ ಹಾಡಿದರು. ರಂಗಚಿನ್ನಾರಿಯ ನಿರ್ದೇಶಕರಾದ ಕೆ. ಸತೀಶ್ಚಂದ್ರ ಭಂಡಾರಿಯವರು ಅತಿಥಿಗಳನ್ನು ಸ್ಮರಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಿದರು ರಂಗಚಿನ್ನಾರಿಯ ನಿರ್ದೇಶಕರಾದ ನ್ಯಾಯವಾದಿ ಎ.ಎನ್. ಅಶೋಕ ಕುಮಾರ್ ವೇದಿಕೆಯಲ್ಲಿದ್ದರು. ಖ್ಯಾತ ವೈದ್ಯ ಗಾಯಕ ಗಾಯಕಿಯರೂ, ಸ್ವರಚಿನ್ನಾರಿಯ ಗಾಯಕ ಗಾಯಕಿಯರು ಹಲವಾರು ಭಾಷೆಯ ಹಾಡುಗಳನ್ನು ಹಾಡಿ ರಂಜಿಸಿದರು. ನಿರ್ದೇಶಕರಾದ ಡಾ. ಸಂತೋಷ್ ಕಾಮತ್ ಅವರು ವಂದಿಸಿದರು.

    ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಜನಾರ್ದನ ನಾಯ್ಕ್ ಅವರು ‘ಸಂಗೀತ ಕೂಡಾ ಕೆಲವು ರೋಗಗಳಿಗೆ ದಿವ್ಯ ಔಷಧವಾಗಿದೆ ಎಂದರಲ್ಲದೆ ‘ಮ್ಯೂಜಿಕ್ ಥೆರಪಿ’ ಅನ್ನೋದು ಈಗ ವ್ಯಾಪಕವಾಗಿ ಜನಪ್ರಿಯವಾಗುತ್ತದೆ. ಸಂಗೀತದ ಕಂಪನ ಪ್ರಾಣಿಗಳಲ್ಲಿ ಕೂಡಾ ಪ್ರಭಾವ ಬೀರುತ್ತದೆ ಎಂದು ಹೇಳಿದರು. ರಂಗಚಿನ್ನಾರಿ ಕಳೆದ ಎರಡು ದಶಕಗಳಿಂದ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಬಗ್ಗೆ ಅಭಿನಂದನೆಗಳನ್ನು ತಿಳಿಸಿದರಲ್ಲದೆ ಐ.ಎಂ.ಎ.ಯ ಕರೋಕೆ ಘಟಕದ ಸಹಯೋಗ ಯಾವತ್ತೂ ಸ್ವರಚಿನ್ನಾರಿಯ ಜೊತೆ ಇರುತ್ತದೆ ಎಂದರು.

    ಸಮಾರೋಪದ ವೇದಿಕೆಯಲ್ಲಿ ಡಾ. ಅನಂತ ಕಾಮತ್, ಡಾ. ಕೆ.ಕೆ. ಶ್ಯಾನು ಭೋಗ್, ಡಾ. ಸಂತೋಷ್ ಕಾಮತ್, ಕೆ. ಸತೀಶ್ಚಂದ್ರ ಭಂಡಾರಿ ವೇದಿಕೆಯಲ್ಲಿದ್ದರು. ಅಂತರ್ಧ್ವನಿಯ ಸಹ ಸಂಚಾಲಕಿ ಬಬಿತಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Articleಅಧಿಕ ಮಾಸದ ಪುಣ್ಯಪರ್ವದಲ್ಲಿ ಶ್ರೀಹರಿಯ ಮಹಿಮೆಯ ತ್ರಿವಳಿ ಯಕ್ಷಗಾನ ಅಖ್ಯಾನಗಳ ಅನಾವರಣ
    Next Article ಚಿತ್ರ ಬುಡ್ಪಾಯೆರ್ ಜೋಕುಲು
    roovari

    Add Comment Cancel Reply


    Related Posts

    ಚಿತ್ರ ಬುಡ್ಪಾಯೆರ್ ಜೋಕುಲು

    June 9, 2026

    ಅಧಿಕ ಮಾಸದ ಪುಣ್ಯಪರ್ವದಲ್ಲಿ ಶ್ರೀಹರಿಯ ಮಹಿಮೆಯ ತ್ರಿವಳಿ ಯಕ್ಷಗಾನ ಅಖ್ಯಾನಗಳ ಅನಾವರಣ

    June 9, 2026

    ಕಲಾತಂಡ, ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 12

    June 9, 2026

    ಶಂಕರನಾರಾಯಣ ಸರ್ಕಾರಿ ಕಾಲೇಜಿನಲ್ಲಿ ಅನುವಾದಿತ ಕಾದಂಬರಿ ಬಿಡುಗಡೆ

    June 9, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.