Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು: `ಟೊಟೊ ಪುರಸ್ಕಾರ’ಕ್ಕೆ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯನ್ನು ಟಿ.ಎಫ್.ಎ. (ಟೊಟೊ ಫಂಡ್ಸ್ ದಿ ಆರ್ಟ್ಸ್). ಸ್ಥಾಪಿಸಿದ್ದು, ಪ್ರಶಸ್ತಿಯು ರೂಪಾಯಿ 60 ಸಾವಿರ ನಗದು ಬಹುಮಾನ ಒಳಗೊಂಡಿದೆ. ಬರಹಗಾರರು 18 ರಿಂದ 29 ವರ್ಷ ವಯಸ್ಸಿನವರಾಗಿರಬೇಕು. ಕಥೆ, ಕವಿತೆ ಅಥವಾ ನಾಟಕ ಪ್ರಕಾರದಲ್ಲಿ ಪ್ರವೇಶಗಳನ್ನು ಕಳುಹಿಸಬಹುದು. ಪ್ರವೇಶಗಳನ್ನು ಕಳುಹಿಸಲು 30 ಸೆಪ್ಟೆಂಬರ್ 2025 ಕೊನೆಯ ದಿನವಾಗಿದ್ದು, ಪ್ರವೇಶ ಪತ್ರವನ್ನು https://totofundsthearts.org/ ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಬರಹ ಮತ್ತು ಪ್ರವೇಶ ಎರಡನ್ನೂ [email protected] ಇಲ್ಲಿಗೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು : ವಿವಿಧ ಪತ್ರಿಕೆಗಳಲ್ಲಿ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ ಸಾಹಿತ್ಯ, ಸಂಸ್ಕೃತಿ ಒಲವಿನ ಹಿರಿಯ ಪತ್ರಕರ್ತ ಕಾರ್ಯಾಡಿ ಮಂಜುನಾಥ ಭಟ್ ಇವರು ಅಸೌಖ್ಯದಿಂದ ದಿನಾಂಕ 17 ಆಗಸ್ಟ್ 2025ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಇವರಿಗೆ 72 ವರ್ಷ ವಯಸ್ಸಾಗಿತ್ತು. ಕುಂದಾಪುರ ತಾಲೂಕಿನ ನ ಗುಡ್ಡಟ್ಟು ಸಮೀಪದ ಹೆಸ್ಕತ್ತೂರು ಗ್ರಾಮದ ಹಾರಾಡಿಯ ಎಚ್. ಲಕ್ಷ್ಮೀನಾರಾಯಣ ಭಟ್ ಮತ್ತು ಗಂಗಮ್ಮ ದಂಪತಿಯ ಪುತ್ರನಾದ ಭಟ್ ಇವರು ಉಡುಪಿಯ ಬೋರ್ಡ್ ಹೈಸ್ಕೂಲ್ನಲ್ಲಿ ಪ.ಪೂ. ಶಿಕ್ಷಣ, ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಯನ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ, ಕುಂಜಿಬೆಟ್ಟು ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ. ಎಡ್. ಪದವಿ ಪಡೆದು ಬೆಂಗಳೂರಿನ ನ್ಯಾಶನಲ್ ಪ್ರೌಢಶಾಲೆಯಲ್ಲಿ ಕೆಲಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಕಾಲೇಜು ದಿನಗಳಿಂದಲೂ ವಾಸವಿರುತ್ತಿದ್ದ ಪೇಜಾವರ ಮಠವನ್ನು ಕೇಂದ್ರೀಕರಿಸಿಕೊಂಡು ಸಾಹಿತ್ಯ, ಸಂಸ್ಕೃತಿಯ ಕುರಿತಾದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಭಟ್, ಶಿಕ್ಷಕ ವೃತ್ತಿಯನ್ನು ಬಿಟ್ಟು ಪತ್ರಿಕಾರಂಗಕ್ಕೆ ಮಂಗಳೂರಿನ ‘ ನವಭಾರತ’ದ ಮೂಲಕ 1977ರಲ್ಲಿ ಕಾಲಿಟ್ಟರು. ಬಳಿಕ ‘ಮುಂಗಾರು’ ಪತ್ರಿಕೆಯ ಆರಂಭದಿಂದ ಕೊನೆಯವರೆಗೂ…
ಎಡನೀರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಎಡನೀರು ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀ ಪಾದಂಗಳವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ದಿನಾಂಕ 18 ಆಗಸ್ಟ್ 2025ರಂದು ಶ್ರೀಮಠದಲ್ಲಿ ತಾಳಮದ್ದಳೆ ‘ಭಕ್ತ ಮಯೂರಧ್ವಜ’ ಎಂಬ ಆಖ್ಯಾನದೊಂದಿಗೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಫುಲ್ಲಚಂದ್ರ ನೆಲ್ಯಾಡಿ, ಗಿರೀಶ್ ಮುಳಿಯಾಲ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪುಂಡಿಕಾಯಿ ರಾಜೇಂದ್ರ ಪ್ರಸಾದ್, ಲಕ್ಷ್ಮೀಶ ಬೇಂದ್ರೋಡಿ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ಮಯೂರಧ್ವಜ), ಗುಡ್ಡಪ್ಪ ಬಲ್ಯ (ತಾಮ್ರ ಧ್ವಜ), ರಾಜೇಂದ್ರ ಕಲ್ಲೂರಾಯ (ನಕುಲಧ್ವಜ), ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ಕೃಷ್ಣ), ಸುಬ್ಬಪ್ಪ ಕೈಕಂಬ (ಅರ್ಜುನ), ಅಚ್ಯುತ ಪಾಂಗಣ್ಣಾಯ (ಕುಮುದ್ವತಿ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಪೂಜ್ಯ ಶ್ರೀಗಳು ಕಲಾವಿದರಿಗೆ ಮಂತ್ರಾಕ್ಷತೆಯನ್ನು ಇತ್ತು ಹರಸಿದರು.
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕಾರ್ಕಳದ ಬಳಿ ನಕ್ರೆಯಲ್ಲಿರುವ ಖ್ಯಾತ ಸಾಹಿತಿ, ಶಿಕ್ಷಕ ಶ್ರೀ ಜೋರ್ಜ್ ಕ್ಯಾಸ್ತೆಲಿನೊರವರ ಮನೆ ‘ನಿಸರ್ಗ’, ಕಲಾಂಜಲಿ ವೇದಿಕೆಯಲ್ಲಿ ತನ್ನ ಅಚ್ಚುಮೆಚ್ಚಿನ ಕಾರ್ಯಕ್ರಮವಾದ ‘ಸಾಹಿತ್ಯ ಸಂಭ್ರಮ- 2 ಮತ್ತು ಕಾವ್ಯಾಂ- ವ್ಹಾಳೊ- 5 ಕಾರ್ಯಕ್ರಮವು ದಿನಾಂಕ 03 ಆಗಸ್ಟ್ 2025ರಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಸಾಹಿತ್ಯದ ಸಂಭ್ರಮವು ನಮ್ಮ ಬದುಕಿನ ಸಂಭ್ರಮವಾಗಬೇಕು. ಎಲ್ಲೆಲ್ಲಿಯೂ ಕೊಂಕಣಿಯ ಸದ್ದು ಸಡಗರ ಕೇಳಬೇಕು” ಎಂದು ಕರೆಕೊಟ್ಟರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ವಂದನೀಯ ಪ್ರಾನ್ಸಿಸ್ ಲುವಿಸ್ ಡೆಸಾರವರು ಮಾತಾನಾಡಿ, “ಕೊಂಕಣಿ ನಮ್ಮ ಜೀವಂತರಗತ ಭಾಗವಾಗಬೇಕು. ಅದು ಬರೇ ಬಳಸುವ ವಸ್ತುವಾಗಬಾರದು. ನಮ್ಮ ಮಾತೃಭಾಷೆಯಲ್ಲಿ ನಾವು ಯೋಚನೆ ಮಾಡುವುದು ಸಾಧ್ಯ. ಆ ಯೋಚನೆಯನ್ನು ಕಾರ್ಯರೂಪಗೊಳಿಸಲು ನಾವೆಲ್ಲರೂ ಪ್ರವೃತರಾಗಬೇಕು” ಎಂದು ಕರೆಕೊಟ್ಟರು. ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಮತ್ತು ಛಂದೋಶಾಸ್ತ್ರ…
ಬೆಂಗಳೂರು : ರಂಗಮಂಡಲ ಅಭಿನಯಿಸುವ ಆಶಾ ರಘು ಅವರ ‘ಪೂತನಿ’ ಏಕವ್ಯಕ್ತಿ ಪ್ರದರ್ಶನ ಮೂಡಲಪಾಯ ಯಕ್ಷಗಾನ ‘ಮ್ಯಾಳ’ ಶೈಲಿಯಲ್ಲಿ ದಿನಾಂಕ 22 ಆಗಸ್ಟ್ 2025ರಂದು ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ನಾಟಕ ಪ್ರದರ್ಶನ ರಂಗರ್ಪಣೆ ನಡೆಯಲಿದೆ. ಕರ್ಣಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಜಾನಪದ ವಿದ್ವಾಂಸರಾದ ಡಾ. ಚಂದ್ರು ಕಾಳೇನಹಳ್ಳಿ ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮಂಡ್ಯ ಕರ್ಣಾಟಕ ಸಂಘದ ಅಧ್ಯಕ್ಷರಾದ ಡಾ. ಜಯಪ್ರಕಾಶ ಗೌಡ ಮತ್ತು ಕರ್ಣಾಟಕ ಜಾನಪದ ಪರಿಷತ್ತು ಅಧ್ಯಕ್ಷರಾದ ಪ್ರೊ. ಹಿ.ಚಿ. ಬೋರಲಿಂಗಯ್ಯ ಇವರಿಗೆ ಅಭಿನಂದನೆ ಹಾಗೂ ಮೇರಿ ಪಿಂಟೋ ಇವರಿಗೆ ರಂಗ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು. ಬಯಲಾಟ.. ದೊಡ್ಡಾಟ.. ಅಟ್ಟದಾಟ.. ಮ್ಯಾಳ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ‘ಮೂಡಲಪಾಯ ಯಕ್ಷಗಾನ’ ಮೂಲ ದ್ರಾವಿಡ ಜನಪದ ರಂಗದಿಂದ ಕವಲೊಡೆದ ವಿಶಿಷ್ಟ ‘ರಂಗ ವೈಭವ’ .. ಪಡವಲಪಾಯ ಯಕ್ಷಗಾನದ ಸೋದರಿಕೆ.. ವಿಭಿನ್ನವಾದ ಶೈಲಿಯನ್ನು ಮೈಗೂಡಿಸಿಕೊಂಡು…
ಧಾರವಾಡ : ಕವಿ ಬೇಂದ್ರೆಯವರನ್ನು ಇನ್ನೊಬ್ಬ ಕನ್ನಡದ ಕವಿ ಗೋಪಾಲಕೃಷ್ಣ ಅಡಿಗರು’ಶ್ರಾವಣ ಪ್ರತಿಭೆ’ಯ ಕವಿ ಎಂದು ಬಣ್ಣಿಸಿದ್ದಾರೆ. ಬೇಂದ್ರೆಯವರು ತೀರಿಕೊಂಡಾಗ ಬೇಂದ್ರೆ ಕಾವ್ಯ ಕುರಿತು ಕನ್ನಡದ ಮೂವರು ಹಿರಿಯ ಕವಿಗಳು ಚರ್ಚಿಸುವಾಗ ಬೇಂದ್ರೆಯವರ ಕಾವ್ಯ ‘ಶ್ರಾವಣ ಪ್ರತಿಭೆ’ಯಿಂದ ಕೂಡಿದ್ದು ಎಂದು ಜಿ.ಎಸ್. ಶಿವರುದ್ರಪ್ಪನವರು ಹೇಳಿದರು. ಗೋಪಾಲಕೃಷ್ಣ ಅಡಿಗರು ತಮ್ಮ’ಸಾಕ್ಷಿ’ಯಲ್ಲಿ TS Eliot ಹೇಳುವ ‘Auditory imagination’ ಎಂಬ ಪದ ಸಮೂಹವನ್ನು ‘ಶ್ರಾವಣ ಪ್ರತಿಭೆ’ ಎಂದು ಕನ್ನಡಕ್ಕೆ ಅನುವಾದಿಸಿ, ಈ ಪ್ರತಿಭೆಯ ಕವಿ ಯಾರೆಂದರೆ ‘ಬೇಂದ್ರೇ’ ಎಂದು ಸಾರಿದರು. ನಾವು ಶ್ರಾವಣ ನೋಡಿದರೆ, ಬೇಂದ್ರೆ ಶ್ರಾವಣ ಕಂಡು, ಅನುಭವಿಸಿ ಅದಕ್ಕೆ ವಿಶಿಷ್ಟ ರೀತಿಯಲ್ಲಿ ಕಾವ್ಯದ ಸಂಸ್ಕಾರ ನೀಡಿದರು. ಶ್ರಾವಣ ಕುರಿತು ಬೇಂದ್ರೆಯವರು ಬರೆದಷ್ಟು ಜಗತ್ತಿನ ಕಾವ್ಯ ಪ್ರಪಂಚದಲ್ಲಿ ಯಾರು ಬರೆದಿಲ್ಲ. ಅವರ ಶ್ರಾವಣವೆಂದರೆ ಧಾರವಾಡದ ಶ್ರಾವಣ, ಸಾಧನಕೇರಿಯ ಶ್ರಾವಣ. ಈ ಶ್ರಾವಣನನ್ನು ನೆನಪಿಸುವ ಕಾರ್ಯಕ್ರಮ ‘ಶ್ರಾವಣದ ಕವಿ ಬೇಂದ್ರೆ’ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಮಹಿಪತಿ ಸಾಂಸ್ಕೃತಿಕ ಕೇಂದ್ರ,…
ಮಂಗಳೂರು : ಶರಧಿ ಪ್ರತಿಷ್ಠಾನ (ರಿ.) ಮಂಗಳೂರು ಆಯೋಜಿಸುವ ಪುಟಾಣಿಗಳ ಕೈಯಿಂದ ‘ಮಣ್ಣಿನ ಗಣಪತಿ ಸ್ಪರ್ಧೆ’ಯನ್ನು ದಿನಾಂಕ 27 ಆಗಸ್ಟ್ 2025ರಂದು ಬೆಳಿಗ್ಗೆ 10-00 ಗಂಟೆಯಿಂದ ಮಂಗಳೂರಿನ ಸೌಟ್ಸ್ ಮತ್ತು ಗೈಡ್ಸ್ ಭವನ ಲಾಲ್ಭಾಗ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯು 1ರಿಂದ 4ನೇ ತರಗತಿ, 5ರಿಂದ 7ನೇ ತರಗತಿ ಮತ್ತು 8ರಿಂದ 10ನೇ ತರಗತಿ ಮೂರು ವಿಭಾಗದಲ್ಲಿ ನಡೆಯಲಿದ್ದು, ನೋಂದಾವಣೆ 8073214624 ಸಂಖ್ಯೆಯನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿರಿ. ನಿಯಮಗಳು ಮತ್ತು ಮಾರ್ಗಸೂಚಿಗಳು : ಮಣ್ಣಿನಿಂದಲೇ ಗಣಪನ ಆಕೃತಿ ತಯಾರಿಸಬೇಕು (ಸ್ಪರ್ಧಾ ಪ್ರಾಯೋಜಕರೇ ಮಣ್ಣನ್ನು ನೀಡುತ್ತಾರೆ / ಸ್ಪರ್ಧಿಗಳೇ ಮಣ್ಣನ್ನು ತರಲು ಅವಕಾಶವಿದೆ) ನೈಸರ್ಗಿಕ ಬಣ್ಣಗಳು : ರಾಸಾಯನಿಕ ಬಣ್ಣಗಳನ್ನು ಬಳಸುವಂತಿಲ್ಲ. ಬದಲಿಗೆ ನೈಸರ್ಗಿಕ ಬಣ್ಣಗಳನ್ನು ಬಳಸಿ, ಅರಿಶಿನ, ಕುಂಕುಮ, ಮತ್ತು ಇತರ ನೈಸರ್ಗಿಕ ವಸ್ತುಗಳಿಂದ ಮಾಡಿದ ಬಣ್ಣಗಳನ್ನು ಬಳಸಬೇಕು. ಅಲಂಕಾರ : ಮಣ್ಣು, ಅರಿಶಿನ, ಕುಂಕುಮ, ಅಕ್ಕಿ ಹಿಟ್ಟು, ಹೂವುಗಳು, ಎಲೆಗಳು, ಹಣ್ಣುಗಳು ಮುಂತಾದ ನೈಸರ್ಗಿಕ ವಸ್ತುಗಳನ್ನು ಬಳಸಿ ಮೂರ್ತಿಗಳನ್ನು ಅಲಂಕರಿಸಬೇಕು.…
ಕಾಸರಗೋಡು : ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಅಂಗ ಸಂಸ್ಥೆಯಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯುವ ಏಕದಿನ ಕನ್ನಡ ಸಾಹಿತ್ಯ ಅಭಿಯಾನವಾದ, ‘ಕನ್ನಡದ ನಡಿಗೆ ಶಾಲೆಯ ಕಡೆಗೆ” ಶೈಕ್ಷಣಿಕ ಶಿಬಿರದ 5ನೇ ಕಾರ್ಯಕ್ರಮವು ದಿನಾಂಕ 23 ಆಗಸ್ಟ್ 2025ರಂದು ಬೆಳಗ್ಗೆ 9-30 ಗಂಟೆಗೆ ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷರಾದ ಡಾ. ಕೆ ವಾಮನ್ ರಾವ್ ಬೇಕಲ್ – ಸಂಧ್ಯಾರಾಣಿ ಟೀಚರ್ ಇವರು ಉದ್ಘಾಟಿಸಲಿದ್ದು, ಶಾಲೆಯ ಆಡಳಿತ ಮಂಡಳಿಯ ಸದಸ್ಯ, ನಿವೃತ್ತ ಶಿಕ್ಷಕ ವಿ.ಬಿ. ಕುಳಮರ್ವ ಸಭೆಯ ಅಧ್ಯಕ್ಷತೆ ವಹಿಸುವರು. ಕೊಂಡೆವೂರು ಶ್ರೀ ಸದ್ಗುರು ನಿತ್ಯಾನಂದ ವಿದ್ಯಾಪೀಠದ ಮುಖ್ಯ ಶಿಕ್ಷಕಿ ರೇಖಾ ಪ್ರದೀಪ್, ಕೊಂಡೆವೂರು ಶ್ರೀ ಸದ್ಗುರು ನಿತ್ಯಾನಂದ ವಿದ್ಯಾಪೀಠದ ಪಿ.ಟಿ.ಎ. ಅಧ್ಯಕ್ಷೆ ಆಶಾ ಪ್ರಕಾಶ್ ರೈ ಕಲಾಯಿ ಶುಭ…
ಭದ್ರಾವತಿ : ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಸಮಿತಿ ಭದ್ರಾವತಿ ಇದರ ವತಿಯಿಂದ ‘ಶ್ರಾವಣ ಸಂಭ್ರಮ – ಗಾಯನ ಸ್ಪರ್ಧೆ’ಯನ್ನು ದಿನಾಂಕ 21 ಆಗಸ್ಟ್ 2025ರಂದು ಮಧ್ಯಾಹ್ನ 04-00 ಗಂಟೆಗೆ ಭದ್ರಾವತಿಯ ರೋಟರಿ ಕ್ಲಬ್ ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಕ.ಸಾ.ಪ. ಮತ್ತು. ಕ.ಸಾ.ಸಾಂ. ವೇದಿಕೆಯ ಜಿಲ್ಲಾಧ್ಯಕ್ಷರಾದ ಡಿ. ಮಂಜುನಾಥ ಇವರು ಉದ್ಘಾಟನೆ ಮಾಡಲಿದ್ದು, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಸುಧಾಮಣಿ ಎಂ.ಎಸ್. ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗಾಯನ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ.
ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 15 ಆಗಸ್ಟ್ 2025ರಿಂದ 17 ಆಗಸ್ಟ್ 2025ರವರೆಗೆ ಕಲೆ- ಸಂಸ್ಕೃತಿ- ಸಾಹಿತ್ಯ ಉಳಿಸುವ, ಬೆಳೆಸುವ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಯೋಜನೆಯಂತೆ ಮೂರು ದಿನಗಳಲ್ಲಿ ಭಜನೆ, ಹರಿಸಂಕೀತನೆ, ಗಮಕ, ಹವ್ಯಾಸಿ ತಂಡಗಳ ಯಕ್ಷಗಾನ ತಾಳಮದ್ದಳೆಗಳು, ವಿದ್ಯಾರ್ಥಿ ಸಮಾಗಮ ಯಶಸ್ವಿಯಾಗಿ ನಡೆಯಿತು. ಮೊದಲ ದಿನ ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡು ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿಯವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ವಿಶ್ರಾಂತ ಪ್ರಾಂಶುಪಾಲರಾದ ಶ್ರೀ ಪಿ.ಯನ್. ಮೂಡಿತ್ತಾಯರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಅಥಿತಿಗಳನ್ನು ಸ್ವಾಗತಿಸಿ, ಜಗದೀಶ ಕೆ. ಕೂಡ್ಲು ನಿರೂಪಿಸಿದರು. ಎರಡನೇ ದಿನ ಶ್ರೀ ವಿಷ್ಣು ಯಕ್ಷ ಬಳಗ ಮಜಿಬೈಲು ಇವರ ‘ನರಕಾಸುರ ಮೋಕ್ಷ’, ಮಹಮ್ಮಾಯಿ ಯಕ್ಷಗಾನ ಕಲಾ ತಂಡ ಬಾಯಾರು ಇವರಿಂದ ‘ಜಾಂಬವತೀ ಕಲ್ಯಾಣ’, ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘ ಶೇಡಿಕಾವು ಇವರ ‘ಸುಧನ್ವ ಮೋಕ್ಷ’, ಶ್ರೀ ರಾಜಗೋಪಾಲ್ ಜೋಶಿ ಮೈರ ಇವರ…