ಬೆಂಗಳೂರು : ಪ್ರವರ ಥಿಯೇಟರ್ ಪ್ರಸ್ತುತಪಡಿಸುವ ಹನು ರಾಮಸಂಜೀವ ಇವರ ನಿರ್ದೇಶನದಲ್ಲಿ ‘Beg Borrow ಅಳಿಯ’ ಕನ್ನಡ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 21 ಜೂನ್ 2026ರಂದು ಸಂಜೆ 5-15 ಮತ್ತು 7-30 ಗಂಟೆಗೆ ಬೆಂಗಳೂರಿನ ಬನ ಶಂಕರಿ 2 ನೇ ಹಂತ, ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ನಾಣಿ ಅಂಗಳದಲ್ಲಿ ಆಯೋಜಿಸಲಾಗಿದೆ. ಕಳೆದ ಏಳು ವರ್ಷಗಳಿಂದ ಅಪಾರ ಮೆಚ್ಚುಗೆ ಪಡೆದಿರುವ ಈ ಕನ್ನಡ ಹಾಸ್ಯ ನಾಟಕವನ್ನು ಎಂ.ಎಸ್. ನರಸಿಂಹಮೂರ್ತಿ ಇವರು ರಚಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9686869676 ಸಂಖ್ಯೆಯನ್ನು ಸಂಪರ್ಕಿಸಿರಿ.

ಸಾರಾಂಶ : “Beg Borrow ಅಳಿಯ” ಹಾಸ್ಯ ನಾಟಕವು ವಸುದೈವ ಕುಟುಂಬಕಂ ತತ್ತ್ವದ ಮೇಲೆ ರೂಪಗೊಂಡಿದೆ. ಅವಿಭಕ್ತ ಕುಟುಂಬದ ಮಹತ್ವ ಮತ್ತು ಇತ್ತೀಚಿನ ದಿನಗಳಲ್ಲಿ ವರಾನ್ವೇಷಣೆ ನಡೆಯುವ ಪರಿ, ಮನೆಯವರ ಬೇಡಿಕೆಗಳೇನು, ಬೇಡಿಕೆಗೆ ಕಾರಣಗಳೇನು ಎಂಬುದನ್ನು ಅತ್ಯಂತ ಮನರಂಜನಾತ್ಮಕ ಪ್ರಸ್ತುತ ಪಡಿಸುತ್ತದೆ ಈ ನಾಟಕ. ಇಂತಹ ಒಂದು ವರಾನ್ವೇಷಣೆಯ ಸಂದರ್ಭದಲ್ಲಿ ಬರುವ ವಿಭಿನ್ನ ಪಾತ್ರಗಳು ಮತ್ತು ಅಲ್ಲಿ ನಡೆಯುವ ಹಾಸ್ಯಮಯ ಸನ್ನಿವೇಶಗಳು ಮತ್ತು ಅದರ ತಿರುವುಗಳು ಪ್ರೇಕ್ಷಕರನ್ನು ಹಾಸ್ಯದ ಹೊನಲಿನಲ್ಲಿ ತೇಲಾಡಿಸುತ್ತದೆ.


