ಕಾರ್ಕಳ : ಸನಾತನ ನಾಟ್ಯಾಲಯ ಪ್ರಸ್ತುತ ಪಡಿಸುವ ನೃತ್ಯ ಗುರು ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆ ವಿದುಷಿ ವರ್ಷಾ ಕಾಕಾತ್ಕರ್ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ದಿನಾಂಕ 20 ಸೆಪ್ಟೆಂಬರ್ 2026ರಂದು ಸಂಜೆ ಗಂಟೆ 4-30ಕ್ಕೆ ಕಾರ್ಕಳದ ಶ್ರೀ ಬಿ. ಮಂಜುನಾಥ ಪೈ ಕಲ್ಚರಲ್ ಹಾಲ್ ನಲ್ಲಿ ಆಯೋಜಿಸಲಾಗಿದೆ.
ಮೈಸೂರಿನ ನೃತ್ಯಾಗಿರಿ ಸಂಸ್ಥೆಯ ನಿರ್ದೇಶಕರಾದ ಡಾ. ಕೃಪಾ ಫಡ್ಕೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಇವರ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನೃತ್ಯ ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟ್ಟುವಾಂಗದಲ್ಲಿ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್, ಹಾಡುಗಾರಿಕೆ ಡಾ. ವಿನೀತ್ ಪುರವಂಕರ, ಮೃದಂಗ ವಾದನ ವಿದ್ವಾನ್ ವಿಕ್ರಮ್ ಭಾರದ್ವಾಜ್, ಕೊಳಲುವಾದನ ವಿದ್ವಾನ್ ಕೆ. ಮುರಳೀದರ್ ಉಡುಪಿ ಮತ್ತು ಮೊರ್ಸಿಂಗ್ ಎಂ. ಸುಧಾಮ ಆಚಾರ್ಯ ಭಾಗವಹಿಸಲಿದ್ದಾರೆ. ಕಲಾಭಿಮಾನಿಗಳಿಗೆ ಹಾರ್ದಿಕ ಸ್ವಾಗತ ಕೋರಲಾಗಿದೆ.

