ಕಣ್ಣೂರು : ಕೇರಳದ ಕೊಟ್ಟಾಯಂನಲ್ಲಿರುವ ಅಂತರರಾಷ್ಟ್ರೀಯ ಮಟ್ಟದ ನೃತ್ಯ ಸಂಸ್ಥೆ ದೈವ ದಶಕಂ ಎಂಟೆ ಗುರು ಸಂಸ್ಥೆಯು ಕರಾವಳಿಯ ಯುವ ನೃತ್ಯ ವಿದ್ವಾಂಸರಾದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರ ಭರತನಾಟ್ಯ ಕಾರ್ಯಾಗಾರವನ್ನು ದಿನಾಂಕ 22 ಆಗಸ್ಟ್ 2026ರಂದು ಕಣ್ಣೂರಿನ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದು, ಕೇರಳದ 30ಕ್ಕೂ ಹೆಚ್ಚಿನ ನೃತ್ಯ ಕಲಾವಿದರು ಮತ್ತು ಗುರುಗಳು ಇದರಲ್ಲಿ ಭಾಗವಹಿಸಿದ್ದರು.

ಮಂಜುನಾಥ್ ಎನ್. ಪುತ್ತೂರು ಇವರು ತಾವೇ ರಚಿಸಿ, ನೃತ್ಯ ಸಂಯೋಜಿಸಿದ ಕ್ಲಿಷ್ಟಕರ ತಿಲ್ಲಾನವನ್ನು ಕಾರ್ಯಾಗಾರದಲ್ಲಿ ಬೋಧಿಸಿ, ಕೊನೆಯಲ್ಲಿ ಮಂಜುನಾಥ್ ಆ ತಿಲ್ಲಾನವನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಿದರು. ತಿಲ್ಲಾನದ ಧ್ವನಿಮುದ್ರಣ ವಿನ್ಯಾಸವೂ ಸಹ ಮಂಜುನಾಥ್ ಎನ್. ಪುತ್ತೂರು ಅವರದೇ ಅನ್ನುವುದೂ ಇನ್ನೊಂದು ವಿಶೇಷ. ಈ ಕಾರ್ಯಾಗಾರವು ಮಂಜುನಾಥ್ ಇವರ 110ನೇಯ ಕಾರ್ಯಾಗಾರವಾಗಿದೆ.



