ಉಡುಪಿ : ಕಲ್ಕೂರ ಪ್ರತಿಷ್ಠಾನ ಪ್ರಕಾಶನ ಪ್ರಕಟಿಸಿರುವ, ಸಾಹಿತಿ ಎಚ್. ಶಾಂತರಾಜ ಐತಾಳ್ ಇವರ 22ನೇ ಕೃತಿ ‘ಕಾ ಪುರುಷ್ ಓ ಮಹಾಪುರುಷ್’ ಬಿಡುಗಡೆ ಸಮಾರಂಭವನ್ನು ದಿನಾಂಕ 02 ಆಗಸ್ಟ್ 2026ರಂದು ಸಂಜೆ ಗಂಟೆ 4-30ಕ್ಕೆ ಉಡುಪಿ ಅಜ್ಜರಕಾಡಿನ ಗೋವಿಂದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೋಟೇಶ್ವರದ ‘ಸ್ಥಿತಿಗತಿ’ ಪತ್ರಿಕೆಯ ಸಂಪಾದಕ ಎನ್. ಭಾಸ್ಕರ ಆಚಾರ್ಯ ಇವರು ಕೃತಿ ಬಿಡುಗಡೆಗೊಳಿಸಲಿದ್ದು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಇವರು ಅಧ್ಯಕ್ಷತೆ ವಹಿಸುವರು.

