ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ನೋಂ) ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಇದರ ವತಿಯಿಂದ ಲೇಖಕ ಡಾ. ಸುಧಾಕರ ಹೊಸಳ್ಳಿ ಇವರ ‘ನಾನೂ ಕಾಫಿರ’ ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 11 ಜೂನ್ 2026ರಂದು ಸಂಜೆ 4-30ಕ್ಕೆ ಮಂಗಳೂರಿನ ಕೊಡಿಯಾಲ್ ಬೈಲ್‌ನ ಎಸ್.ಡಿ.ಎಂ. ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಲೇಖಕ ಡಾ. ಸುಧಾಕರ ಹೊಸಳ್ಳಿ ಬರೆದ ‘ನಾನೂ ಕಾಫಿರ’ ಅಂಬೇಡ್ಕರ್ ಅವರ ಹಿಂದುತ್ವ ಕಥನ ಪುಸ್ತಕ ಬಿಡುಗಡೆ ಸಮಾರಂಭವು ದಿನಾಂಕ 11 ಜೂನ್ 2026ರಂದು ಮಂಗಳೂರಿನ ಕೊಡಿಯಾಲ್ ಬೈಲ್‌ನ ಎಸ್.ಡಿ.ಎಂ. ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಜರಗಿತು.
ಪುಸ್ತಕ ಬಿಡುಗಡೆಗೊಳಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕಲಾ ನಿಕಾಯದ ಡೀನ್ ಪ್ರೊ. ಸೋಮಣ್ಣ ಹೊಂಗಳ್ಳಿ ಇವರು ಮಾತನಾಡಿ “ಅಂಬೇಡ್ಕರ್ ಹಿಂದೂ ಧರ್ಮದ ಗಟ್ಟಿಯಾದ ಸಮರ್ಥಕ ಮತ್ತು ಸುಧಾರಕ. ಅವರನ್ನು ನಮಗೆ ತಪ್ಪಾಗಿ ತಿಳಿಸುವ ಪ್ರಯತ್ನಗಳಾಗಿವೆ. ಅಂಬೇಡ್ಕರ್ ಅವರ ನೈಜ ಅಭಿಪ್ರಾಯ ಸಮಾಜಕ್ಕೆ ತಿಳಿಯಬೇಕಾಗಿದೆ” ಎಂದು ಹೇಳಿದರು.
ಪುಸ್ತಕ ಪರಿಚಯಿಸಿದ ಅಂಕಣಕಾರ ಪ್ರವೀಣ್ ಕುಮಾರ್ ಮಾವಿನಕಾಡು, “ಹೇಗೆ ನಾನು ಗೌರಿ, ನಾನು ಅಪ್ಜಲ್ ಎನ್ನುವ ಪ್ರತಿರೋಧಗಳು ಬಂತೋ ಆ ಪ್ರತಿರೋಧದ ಮೂಲ ಅಂಬೇಡ್ಕರ್ ಅವರ ‘ನಾನೂ ಕಾಫಿರ’ ಅನ್ನುವ ಹೇಳಿಕೆ. ಸರ್ವೇ ಜನಾಃ ಸುಖಿನೋ ಭವಂತು ಎಂದು ಹೇಳುವ ಹಿಂದೂ ಧರ್ಮ ಯಾವತ್ತಿಗೂ ಪರರನ್ನು ದ್ವೇಷಿಸಿಲ್ಲ” ಎಂದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಸುಧಾಕರ ಹೊಸಳ್ಳಿ, ಅ.ಭಾ.ಸಾ.ಪ. ಪ್ರಾಂತ ಕಾರ್ಯಕಾರಿಣಿ ಸದಸ್ಯ ಶೈಲೇಶ್ ಕುಲಾಲ್, ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷೆ ವೀಣಾ ಶೆಟ್ಟಿ, ಸಹ ಕಾರ್ಯದರ್ಶಿ ಗೀತಾ ಲಕ್ಷ್ಮೀಶ್ ಉಪಸ್ಥಿತರಿದ್ದರು. ಸಮಿತಿಯ ಸಹಕಾರ್ಯದರ್ಶಿ ಶ್ರೀಲಕ್ಷ್ಮಿ ಮಠದಮೂಲೆ ನಿರೂಪಿಸಿದರು.
