ಮಂಗಳೂರು : ಆರ್ಟ್ ಕೆನರಾ ಟ್ರಸ್ಟ್ ಮಂಗಳೂರು ಮತ್ತು ಕವಿತಾ ಕುಟೀರ ಪೆರಡಾಲ ಇವರ ಸಹಯೋಗದಲ್ಲಿ ಕಾಸರಗೋಡಿನ ಪೆರಡಾಲದ ನವಜೀವನ ಹೈಸ್ಕೂಲಿನ ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಆಯೋಜಿಸಲಾಗುವ ನೂರ ಒಂದು (101) ಕತೆಗಳ ಮತ್ತು ಕವನಗಳ ಸಂಕಲನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವರೇ, ಅವಕಾಶ ಪಡೆಯುವುದಕ್ಕಾಗಿ ತಮ್ಮ ಬರಹಗಳನ್ನು ಸಲ್ಲಿಸಲು ಕೋರಲಾಗಿದೆ.
1) ನಾಡೋಜ ಕವಿ ಕೈಯ್ಯಾರ ಕಿಂಞಣ್ಣ ರೈ ಅವರ ಸ್ಮರಣಾರ್ಥವಾಗಿ ಪ್ರಕಟಿಸಲಾಗುವ ಈ ಕೃತಿಗೆ ನೀವು ಕಳುಹಿಸುವ ಬರಹಗಳು ಕನ್ನಡ ಭಾಷೆಯಲ್ಲಿ ಇರಬೇಕು.
2) 18ರಿಂದ 35 ವರ್ಷ ವಯೋಮಾನದವರು ಅಂದರೆ ಜನವರಿ 1988ರಿಂದ ದಶಂಬರ 2004ರ ಮಧ್ಯೆ ಜನಿಸಿದವರು ಅರ್ಹರಾಗಿರುತ್ತಾರೆ.
3) ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹುಟ್ಟಿ ಬೆಳೆದ ಹಾಗೂ ವಿದ್ಯಾರ್ಥಿಗಳಾಗಿರುವ ಎಲ್ಲರಿಗೂ ಭಾಗವಹಿಸುವ ಅವಕಾಶವಿದೆ.
4) ಬರಹಗಳ ಶಬ್ದ ಮಿತಿಯು 300 ಪದಗಳನ್ನು ಮೀರದಂತೆ ಕವನ ಮತ್ತು 500 ಪದಗಳನ್ನು ಮೀರದಂತೆ ಸಣ್ಣ ಕತೆ (micro stories) ಆಯ್ಕೆಗಾಗಿ 3ರಿಂದ 5 ಕತೆ-ಕವನಗಳು ಅಥವಾ 10ರಿಂದ 12 ಚುಟುಕುಗಳನ್ನು ಕಳುಹಿಸಬಹುದು.
5) ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ 10-09-2023
6) ಬರಹ ಯೂನಿಕೋಡ್ನಲ್ಲಿ ಇರಬೇಕು. ಸ್ವಂತ ರಚನೆ ಆಗಿರಬೇಕು. ಯಾವುದೇ ಪತ್ರಿಕೆಗಳಲ್ಲಿ ಯಾ ಬ್ಲಾಗ್ ಗಳಲ್ಲಿ ಪ್ರಕಟವಾಗಿರಬಾರದು. ಕೃತಿ ಚೌರ್ಯಕ್ಕೆ ಅವಕಾಶವಿಲ್ಲ, ಮಾಡಿದಲ್ಲಿ ಅವರೇ ಜವಾಬ್ದಾರರು.
7) ಪ್ರತ್ಯೇಕ ಪುಟದಲ್ಲಿ ಹೆಸರು, 80 ಪದಗಳಿಗೆ ಮೀರದ ಕಿರು ಪರಿಚಯ, ಅಂಚೆ ವಿಳಾಸ, ಮೊಬೈಲ್ ನಂಬರ್, ಇಮೇಲ್, ಭಾವಚಿತ್ರ, ಕಾಲೇಜಿನ ಐಡಿ ಅಥವಾ ಆಧಾರ್ ಪ್ರತಿಯನ್ನು ಕಳುಹಿಸತಕ್ಕದ್ದು.
8) ಆಯ್ಕೆಯಾದ ಬರಹಗಳನ್ನು ಸಂಬಂಧಪಟ್ಟವರಿಗೆ ಅಕ್ಟೋಬರ್ 31ರ ಒಳಗೆ ತಿಳಿಸಲಾಗುವುದು. ಆಯ್ಕೆಯಲ್ಲಿ ತೀರ್ಪುಗಾರರದ್ದೇ ಅಂತಿಮ ನಿರ್ಧಾರ.
9) ಬರಹಗಳನ್ನು ಕಳುಹಿಸಬೇಕಾದ ಇಮೇಲ್ – [email protected]
10) ವಿಳಾಸ : ಕೊಡಿಯಾಲ್ ಗುತ್ತು, ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ, 12/1139/1, ಕೊಡಿಯಾಲ್ ಗುತ್ತು (ಪಶ್ಚಿಮ), ಬಂಗಾರ್ ಗುತ್ತು ರಸ್ತೆ, ಮಂಗಳೂರು – 575003.