ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜಿಲ್ಲೆಯ ವಕೀಲರಾದ ಶ್ರೀ ಪೇರಿಯಂಡ ಪಿ. ಪೆಮ್ಮಯ್ಯ ಮತ್ತು ಶ್ರೀಮತಿ ಜಿ.ಕೆ. ದೇವಕಿ ಪೆಮ್ಮಯ್ಯರವರು ಸ್ಥಾಪಿಸಿರುವ ‘ಸಾಹಿತ್ಯ ಪ್ರಶಸ್ತಿ’ಯ ಪ್ರಥಮ ವರ್ಷದ ಪ್ರಶಸ್ತಿಯು ಸಾಹಿತಿ ಡಾ. ಕೋರನ ಸರಸ್ವತಿ ಇವರಿಗೆ ಲಭಿಸಿದೆ.
ಡಾ. ಕೋರನ ಸರಸ್ವತಿ ಜಿಲ್ಲೆಯ ಹಿರಿಯ ಸಾಹಿತಿ, ಕವಯಿತ್ರಿ, ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು. ಕನ್ನಡ ಮತ್ತು ಅರೆ ಭಾಷೆಯಲ್ಲಿ ಏಳು ಕೃತಿಗಳನ್ನು ಪ್ರಕಟಿಸಿದ್ದು, ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಹಲವಾರು ರಾಷ್ಟ್ರೀಯ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ, ಕವಿಗೋಷ್ಠಿಗಳಲ್ಲಿ ಅಧ್ಯಕ್ಷತೆ, ಆಕಾಶವಾಣಿಯಲ್ಲಿ 58 ಚಿಂತನ ಕಾರ್ಯಕ್ರಮಗಳು, ಹಲವಾರು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಇವರು ಪಾಲ್ಗೊಂಡಿರುವುದು ವಿಶೇಷ. ಡಾ. ಕೋರನ ಸರಸ್ವತಿ ಅವರನ್ನು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಭಿನಂದಿಸಿದ್ದಾರೆ.
