ಉಡುಪಿ : ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ಇದರ ರಜತ ಸಂಭ್ರಮ ಪ್ರಯುಕ್ತ ಸರಣಿ ಕಾರ್ಯಕ್ರಮ ‘ಯುವ ರಂಗಸಂಗಮ’ ರಾಜ್ಯಮಟ್ಟದ ಅಂತರ್ ಕಾಲೇಜು ನಾಟಕ ಹಾಗೂ ಕಲಾಜಾಥಾ ಸ್ಪರ್ಧೆಯನ್ನು ದಿನಾಂಕ 5, 6 ಮತ್ತು 7 ಫೆಬ್ರುವರಿ 2027ರಂದು ಉಡುಪಿಯಲ್ಲಿ ಆಯೋಜಿಸಲಾಗಿದೆ.
ನಾಟಕ ವಿಭಾಗದಲ್ಲಿ ಪ್ರಥಮ ಬಹುಮಾನ ರೂ.50,000/-, ದ್ವಿತೀಯ ರೂ.30,000/- ಮತ್ತು ತೃತೀಯ ರೂ.20,000/- ಹಾಗೂ ಕಲಾಜಾಥಾ ವಿಭಾಗದಲ್ಲಿ ಪ್ರಥಮ ಬಹುಮಾನ ರೂ.10,000/-, ದ್ವಿತೀಯ ರೂ.7,000/- ಮತ್ತು ತೃತೀಯ ರೂ.5,000/-ವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಅಕ್ಷತ್ ಅಮೀನ್ 79751 24285 ಮತ್ತು ಪ್ರಜ್ಞಾಶ್ರೀ 99643 45208 ಸಂಖ್ಯೆಗಳನ್ನು ಸಂಪರ್ಕಿಸಿರಿ.

