ಬೆಳ್ತಂಗಡಿ : ಮಾಜಿ ಶಾಸಕ ದಿವಂಗತ ಕೆ. ವಸಂತ ಬಂಗೇರ ಬ್ರಿಗೇಡ್ ವತಿಯಿಂದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ‘ಜನನಾಯಕ, ಜನಸೇವಕ ಕೆ. ವಸಂತ ಬಂಗೇರರ ಜೀವನ ಚರಿತ್ರೆ, ವ್ಯಕ್ತಿತ್ವ ಮತ್ತು ಕೊಡುಗೆ’ ಪ್ರಬಂಧದ ವಿಷಯವಾಗಿದೆ.
ಸ್ಪರ್ಧಿಗಳು ತಮ್ಮ ಊರು, ಗ್ರಾಮ ಹಾಗೂ ಪರಿಸರಕ್ಕೆ ಕೆ. ವಸಂತ ಬಂಗೇರರು ನೀಡಿದ ಕೊಡುಗೆಗಳನ್ನು ಪ್ರಬಂಧದಲ್ಲಿ ಉಲ್ಲೇಖಿಸಬಹುದು. ಕೈಬರಹದ ಪ್ರಬಂಧವು ಕಡ್ಡಾಯವಾಗಿ 2,000ಕ್ಕಿಂತ ಹೆಚ್ಚು ಪದ ಹೊಂದಿರಬೇಕು. ಬೆಳ್ತಂಗಡಿ ತಾಲೂಕಿನವರಿಗೆ ಸೀಮಿತವಾಗಿದ್ದು 18 ವರ್ಷ ಮೇಲ್ಪಟ್ಟ ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಎ4 ಹಾಳೆಯ ಒಂದು ಬದಿಯಲ್ಲಿ ಸ್ಪಷ್ಟವಾಗಿ ಬರೆಯಬೇಕು. ಪ್ರಬಂಧದ ಜತೆ ಬರೆದವರ ಆಧಾರ್ ಕಾರ್ಡ್ ಪ್ರತಿ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಕಡ್ಡಾಯವಾಗಿ ಲಗತ್ತಿಸಬೇಕು.
ಪ್ರಬಂಧವನ್ನು ದಿನಾಂಕ 05 ಡಿಸೆಂಬರ್ 2026ಕ್ಕೂ ಮುಂಚಿತವಾಗಿ ಬಿನುತ ಬಂಗೇರ, ಕೆ. ವಸಂತ ಬಂಗೇರರ ಕಚೇರಿ, ಶ್ರೀಗುರುನಾರಾಯಣ ವಾಣಿಜ್ಯ ಸಂಕೀರ್ಣ, ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ -574214 ಈ ವಿಳಾಸಕ್ಕೆ ಮುಖತಃ ಅಥವಾ ಅಂಚೆ ಮೂಲಕ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ 94491 65890 ಸಂಪರ್ಕಿಸಬಹುದು. ಆಯ್ಕೆಯಾಗುವ ಪ್ರಬಂಧಗಳಿಗೆ ಪ್ರಥಮ ರೂ.15,000/-, ದ್ವಿತೀಯ ರೂ.10,000/-, ತೃತೀಯ ರೂ.7,500/- ನಗದು ಪುರಸ್ಕಾರ ನೀಡಲಾಗುವುದು.
