ಮೂಲ್ಕಿ : ಮೂಲ್ಕಿ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಇದರ ವತಿಯಿಂದ ಸುರತ್ಕಲ್‌ನ ‘ಅಟ್ಲಾಸ್ ಗೋಲ್ಡ್ ಆ್ಯಂಡ್ ಡೈಮಂಡ್’ ಸಹಯೋಗದೊಂದಿಗೆ 80ನೇ ಸ್ವಾತಂತ್ರೋತ್ಸವ ಪ್ರಯುಕ್ತ ಮೂಲ್ಕಿ ತಾಲೂಕು ಮಟ್ಟದ ‘ನಂಡೊ ಪಿರ್ಸತ್ತೊ ಭಾರತ’ ಬ್ಯಾರಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.
ಪ್ರಬಂಧವು ಕನ್ನಡ ಲಿಪಿಯಲ್ಲಿ ಬ್ಯಾರಿ ಭಾಷೆಯಲ್ಲಿರಬೇಕು. ಪ್ರಬಂಧವನ್ನು ಒಂದುಗೆರೆಯ ಪುಟದಲ್ಲಿ ಸ್ಪಷ್ಟವಾದ ಕೈಬರಹದಲ್ಲಿ ಬರೆದಿರಬೇಕು. ಗರಿಷ್ಠ 300 ಪದಗಳು ಮೀರದಂತಿರಬೇಕು. ಸ್ಪರ್ಧಿಗಳು ಹೆಸರು, ವಿಳಾಸ, ಫೋಟೊ, ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಪ್ರಬಂಧದ ಕೆಳಗೆ ಸ್ಪಷ್ಟವಾಗಿ ಬರೆಯಬೇಕು. ಪ್ರಬಂಧವನ್ನು ದಿನಾಂಕ 10 ಆಗಸ್ಟ್ 2026ರ ಮೊದಲು, ಸಮಯ ಕಮ್ಯುನಿಕೇಶನ್ ನಂ.204, ಸಿಟಿ ಸ್ಕ್ವೇರ್ ಬಿಲ್ಡಿಂಗ್, ಮೈದಾನ ರಸ್ತೆ, ಸುರತ್ಕಲ್ -575014 ಈ ವಿಳಾಸಕ್ಕೆ ಕಳುಹಿಸಬೇಕು.
ಮಾಹಿತಿಗಾಗಿ ಬಶೀರ್ ಮೂಡುತೋಟ (98806 39141), ತ್ವಯ್ಯಿಬ್ (9567493297), ರಹ್ಮಾನ್ ಹಳೆಯಂಗಡಿ (9880427527) ಇವರನ್ನು ಸಂಪರ್ಕಿಸಬಹುದು ಎಂದು ಮೂಲ್ಕಿ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಸಾರ್ ಅಹ್ಮದ್ ಅಂಗರಗುಡ್ಡೆ ತಿಳಿಸಿದ್ದಾರೆ.
