ಬೆಂಗಳೂರು : ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಇವರ ಜಂಟಿ ಸಹಯೋಗದೊಂದಿಗೆ ಆಯೋಜಿಸಿದ ‘ಬೆಂಗಳೂರು ಕಿರುನಾಟಕೋತ್ಸವ’ದ ಅಂತಿಮ ಹಂತದ ಸ್ಪರ್ಧೆಯು ದಿನಾಂಕ 11 ಜುಲೈ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆಯಲಿದೆ.
ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದ ಆರು ನಾಟಕಗಳು : ದಾಟು ಥಿಯೇಟರ್ ತಂಡದ ‘ಪ್ರತಿಬಿಂಬ’, ಖಾಲಿರಂಗ ತಂಡದ ‘ಅನಾಥ ಪ್ರಜ್ಞೆ’, ಕಲಾರಾಧ್ಯ ತಂಡದ ‘ಭ್ರಮೆ’, ಮನೋಜ್ಞ ತಂಡದ ‘ವಿಷಬೀಜ’, ಧ್ವನಿ ತಂಡದ ‘Horn ok Please AVOID’, ಸ್ಪಷ್ಟ ಥಿಯೇಟರ್ ತಂಡದ ‘The waiting room’ ನಾಟಕಗಳು ಪ್ರದರ್ಶನಗೊಳ್ಳಲಿದೆ.

