ಕಿನ್ನಿಗೋಳಿ : ಯುಗಪುರುಷ ಕಿನ್ನಿಗೋಳಿ ಇವರ ವತಿಯಿಂದ ಮಹಾನ್ ವಿದ್ವಾಂಸ ಅಧ್ಯಾಪಕ ಕಲಾವಿದ ಸಂಶೋಧಕ ದಿ. ಪು. ಶ್ರೀನಿವಾಸ ಭಟ್ ಕಟೀಲು ಇವರ ಸ್ಮೃತಿ ದಿನ ಕಾರ್ಯಕ್ರಮವನ್ನು ದಿನಾಂಕ 11 ಜುಲೈ 2026ರಂದು ಅಪರಾಹ್ನ 3-30 ಗಂಟೆಗೆ ಕಿನ್ನಿಗೋಳಿ ಯುಗಪುರುಷ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಪು. ಶ್ರೀ. ಕೃತಿ ಸ್ಮೃತಿ, ಗೀತ ಗಾಯನ, ಮಕ್ಕಳ ಯಕ್ಷಗಾನ, ಪು. ಶ್ರೀ. ಸ್ಮೃತಿ ಸ್ಮರಣಗ್ರಂಥ ಬಿಡುಗಡೆ, ಪ್ರಶಸ್ತಿ ಪ್ರದಾನ, ಪು. ಶ್ರೀ. ಬೃಹತ್ ಲೇಖನ ಸಂಪುಟ ‘ಸಂಸ್ಕೃತಿ ಸಿರಿ ಸಂಪದ’ ಅವಲೋಕನ ಕಾರ್ಯಕ್ರಮಗಳು ನಡೆಯಲಿದೆ.
ಬೆಂಗಳೂರು ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಡಾ. ಎಂ. ಪ್ರಭಾಕರ್ ಜೋಶಿ ಇವರಿಗೆ ‘ಪು. ಶ್ರೀ. ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಯುಗಪುರುಷ ಪ್ರಕಟಣಾಲಯದ 540ನೇ ಕೃತಿ ‘ಪು. ಶ್ರೀ. ಸ್ಮೃತಿ’ಯನ್ನು ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ಚಂದ್ರ ಶೇಖರ ಸ್ವಾಮೀಜಿಯವರು ಬಿಡುಗಡೆ ಮಾಡಲಿದ್ದು, ಡಾ ಪಾದೆಕಲ್ಲು ವಿಷ್ಣು ಭಟ್, ಡಿ.ಎಸ್. ಶ್ರೀಧರ ಕಿನ್ನಿಗೋಳಿ, ಡಾ. ಎಕ್ಕಾರು ಪದ್ಮನಾಭ ಭಟ್, ಡಾ. ಬಿ. ಜನಾರ್ದನ ಭಟ್ ಮಟ್ಟು ಡಾ. ಪೃಥ್ವಿರಾಜ್ ಕವತ್ತಾರು ಇವರಿಂದ ಪು. ಶ್ರೀ. ಕೃತಿ – ಸ್ಮೃತಿ, ಗ್ರಂಥ ವಿಮರ್ಶೆ, ಸಾಧನೆ ಮತ್ತು ನೆನಪುಗಳು. ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದಿಂದ ‘ಶ್ರೀ ಕೃಷ್ಣಲೀಲೆ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

