ಧಾರವಾಡ : ಬೆಳಗಾವಿಯ ಶ್ರೀ ಲಕ್ಕಮ್ಮಾದೇವಿ ಕಲಾ ಪೋಷಕ ಸಂಘ (ರಿ.) ಇದರ ವತಿಯಿಂದ 9ನೇ ವಾರ್ಷಿಕೋತ್ಸವ ಪ್ರಯುಕ್ತ ‘ಅಖಿಲ ಕರ್ನಾಟಕ 5ನೇ ಜಾನಪದ ನೃತ್ಯ ಕಲಾಮೇಳ’ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 16 ಮೇ 2026ರಂದು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಂಜಾನೆ 9-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಮಾರಿ ಅಂಕಿತಾ ರೇವಣಕರ ಹಾಗೂ ತಂಡದವರಿಂದ ಜನಪದ ನೃತ್ಯ, ಕುಮಾರಿ ಸೃಷ್ಠಿ ಹಿರೇಮಠ ಕಲಾವಿದೆ ಯಿಂದ ಭರತನಾಟ್ಯ, ಶಬ್ಬಿರ್ ಡಾಂಗೆ ಇವರಿಂದ ಜನಪದ ಗಾಯನ ಹಾಗೂ ಧಾರವಾಡದ ಮಕ್ಕಳ ಸಾಹಿತ್ಯ ಪರಿಷತ್ ಮಕ್ಕಳಿಂದ ಜನಪದ ನೃತ್ಯ ಪ್ರಸ್ತುತಗೊಳ್ಳಲಿದೆ. 10-00 ಗಂಟೆಗೆ ಬೆಳಗಾವಿಯ ಶ್ರೀ ಲಕ್ಕಮ್ಮಾದೇವಿ ಕಲಾ ಪೋಷಕ ಸಂಘ ಬ್ಯಾಕೊಡ ಇವರ ಗೌರವಾಧ್ಯಕ್ಷರಾದ ಡಾ. ಸಿದ್ದಣ್ಣ ಬಾಡಗಿ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಜಾನಪದ ವಿದ್ವಾಂಸ ಸಾಹಿತಿ ಡಾ. ಸಿ.ಕೆ. ನಾವಲಗಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ‘ಜನಪದ ಸಾಹಿತ್ಯ ಅಂದು – ಇಂದು’ ಎಂಬ ವಿಷಯದ ಬಗ್ಗೆ ಡಾ. ದಯಾನಂದ ಹುದ್ದಾರ ಇವರು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಭರತ ಭೂಷಣ ಆದರ್ಶ ದಂಪತಿ ರಾಷ್ಟ್ರ ಪ್ರಶಸ್ತಿ ಮತ್ತು ‘ನ್ಯಾಶನಲ್ ಅಚಿವ್ಮೆಂಟ್ ಗ್ಲೋಬಲ್ ಅವಾರ್ಡ್’ ಪ್ರದಾನ ಮಾಡಲಾಗುವುದು.

