ಮಂಗಳೂರು : ಸಂಗೀತ ಪರಿಷತ್ ಮಂಗಳೂರು (ರಿ.) ಇವರ ಆಶ್ರಯದಲ್ಲಿ ಸಂಗೀತ ವಿದ್ವಾನ್ ಎನ್. ಗೋಪಾಲಕೃಷ್ಣ ಐಯ್ಯರ್ ಸ್ಮರಣಾರ್ಥ ಸಂಗೀತ ಕಛೇರಿಯನ್ನು ದಿನಾಂಕ 17 ಮೇ 2026ರ ಭಾನುವಾರ ಮಂಗಳೂರಿನ ರಾಮಕೃಷ್ಣ ಮಠದ ಅಮೃತ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಪರಾಹ್ನ ಗಂಟೆ 3-30ಕ್ಕೆ ಪುತ್ತೂರಿನ ಕುಮಾರಿ ಅನುಶ್ರೀ ಮಳಿ ಇವರಿಂದ ಹಾಡುಗಾರಿಕೆ ಕಛೇರಿಯು ವಿಜೇತ ಸುಬ್ರಹ್ಮಣ್ಯ ವಯಲಿನ್ ಹಾಗೂ ವೆಂಕಟ ಯಶಸ್ವಿ ಇವರ ಮೃದಂಗ ಸಹಕಾರದೊಂದಿಗೆ ನಡೆಯಲಿದೆ.
ಸಂಜೆ ಗಂಟೆ 5-15ಕ್ಕೆ ಸರಿಯಾಗಿ ಪ್ರಧಾನ ಕಛೇರಿ ಚೆನೈನ ಭರತ್ ನಾರಾಯಣ್ ಇವರ ಹಾಡುಗಾರಿಕೆ. ಇವರಿಗೆ ಆದಿತ್ಯ ಅನಿಲ್ ತ್ರಿಶೂರ್ ವಯಲಿನ್, ಕೃಪಾಲ್ ಸಾಯಿರಾಂ ಕೊಚ್ಚಿ ಮೃದಂಗ, ಬಾಲಕೃಷ್ಣ ಪುತ್ತೂರು ಮೋರ್ಸಿಂಗ್ ಪಕ್ಕವಾದ್ಯ ನೀಡಲಿದ್ದಾರೆ.
ಮಂಗಳೂರಿನ ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠದ ಸಹಯೋಗದೊಂದಿಗೆ ಹಾಗೂ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಿದ್ವಾನ್ ಎನ್. ಗೋಪಾಲಕೃಷ್ಣ ಅಯ್ಯರ್ ಶಿಷ್ಯರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಲ್ಲಾ ಕಲಾಭಿಮಾನಿಗಳಿಗೆ ಮುಕ್ತ ಪ್ರವೇಶವಿದೆ.

