ಬೆಂಗಳೂರು : ಕನ್ನಡ ಭಾವ ತರಂಗ ಸಾಹಿತ್ಯ ಸಂಘ ತಾವರೆಕೆರೆ, ತಾವರೆಕೆರೆ ವಿಪ್ರ ಪರಿಷತ್ ಬೆಂಗಳೂರು, ಕರ್ನಾಟಕ ಗಜಲ್ ಅಕಾಡೆಮಿ ಬೆಂಗಳೂರು ಮತ್ತು ತುಳುವ ಚಾವಡಿ ದಾಸಕೋಡಿ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಗಜಲ್ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 25 ಅಕ್ಟೋಬರ್ 2026ರಂದು ಬೆಳಿಗ್ಗೆ 9-30 ಗಂಟೆಗೆ ಮಾಗಡಿ ರಸ್ತೆ ತಾವರೆಕೆರೆಯಲ್ಲಿರುವ ದೂರ ಸಂಪರ್ಕ ನಗರ, ಸಮುದಾಯ ಭವನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀಯುತ ಹಾ. ಮ. ಸತೀಶ ಇವರ ‘ಚಿಗರೆ’ ಗಜಲ್ ಸಂಕಲನ ಬಿಡುಗಡೆಗೊಳ್ಳಲಿದ್ದು, ಬಹುಭಾಷಾ ಸಾಹಿತಿ ಮಹಮ್ಮದ್ ಬಡ್ಡೂರು ಇವರು ಕೃತಿ ಲೋಕಾರ್ಪಣೆ ಮತ್ತು ಪರಿಚಯ ಮಾಡಲಿದ್ದಾರೆ. ಸಾಹಿತಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ಗಜಲ್ ಅಕಾಡೆಮಿ ಅಧ್ಯಕ್ಷರಾದ ರಂಗಸ್ವಾಮಿ ಸಿದ್ದಯ್ಯ ಇವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.

