Subscribe to Updates

    Get the latest creative news from FooBar about art, design and business.

    What's Hot

    ಹಾ. ಮ. ಸತೀಶ ಇವರ ‘ಚಿಗರೆ’ ಗಜಲ್ ಸಂಕಲನ ಬಿಡುಗಡೆ | ಅಕ್ಟೋಬರ್ 25

    October 21, 2026

    ಸುಮಿತ್ರಾ ಗೌಡ ಇವರಿಗೆ ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ

    October 21, 2026

    ವಂದನೀಯ ಕ್ಲೆಮೆಂಟ್‌ ಮಸ್ಕರೇನ್ಹಸ್ ಇವರಿಗೆ 22ನೇ ‘ಕಲಾಕಾರ್‌ ಪುರಸ್ಕಾರ’ ಘೋಷಣೆ

    October 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕೂಚಿಪುಡಿ ನಾಟ್ಯ ಪರಂಪರ ಹದಿಮೂರನೆಯ ನೃತ್ಯೋತ್ಸವ -2026 | ಅಕ್ಟೋಬರ್ 29
    Dance

    ಕೂಚಿಪುಡಿ ನಾಟ್ಯ ಪರಂಪರ ಹದಿಮೂರನೆಯ ನೃತ್ಯೋತ್ಸವ -2026 | ಅಕ್ಟೋಬರ್ 29

    October 21, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯಶೈಲಿಯಲ್ಲಿ ನಾಲ್ಕುದಶಕಗಳಿಂದ ಪರಿಶ್ರಮಿಸುತ್ತಿರುವ ಆಚಾರ್ಯ ದೀಪಾ ನಾರಾಯಣನ್ ಶಶೀಂದ್ರನ್ ಸುಮಾರು ಐದುನೂರು ವರ್ಷಗಳ ಇತಿಹಾಸವುಳ್ಳ ಕೂಚಿಪುಡಿ ನೃತ್ಯಶೈಲಿಯ ಖ್ಯಾತ ಗುರು ಪದ್ಮಭೂಷಣ ಡಾ. ವೆಂಪಟಿ ಚಿನ್ನಸತ್ಯಂ ಅವರ ಎರಡನೆಯ ಪರಂಪರೆಗೆ ಸೇರಿದವರು. ಖ್ಯಾತ ಕೂಚಿಪುಡಿ ನಾಟ್ಯಗುರು-ನೃತ್ಯ ಕಲಾವಿದೆ, ಸಂಯೋಜಕಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರುವ ಇವರು, ‘ಕೂಚಿಪುಡಿ ಪರಂಪರ ಫೌಂಡೇಷನ್ ಟ್ರಸ್ಟ್’ನ ಲೈಫ್ ಟ್ರಸ್ಟಿಯಾಗಿ ವರ್ಷಪೂರ್ತಿ ನಿರಂತರ ಒಂದಲ್ಲ ಒಂದು ನೃತ್ಯ ಚಟುವಟಿಕೆಗಳಲ್ಲಿ ಕಾರ್ಯನಿರತರು. ಇವರ ಇತ್ತೀಚಿನ ಅದ್ಭುತ ನೃತ್ಯರೂಪಕ ಪ್ರಯೋಗ ‘ನಂದನಾರ್’ ದೇಶ-ವಿದೇಶಗಳಲ್ಲಿ ಹಲವಾರು ಬಾರಿ ಪ್ರದರ್ಶಿತವಾಗಿ ಮನೆಮಾತಾಗಿದೆ.

    ತಮ್ಮ ಅಸಂಖ್ಯ ನೃತ್ಯ ಪ್ರದರ್ಶನಗಳಿಂದ ಖ್ಯಾತರಾದ ದೀಪಾ, ತಮ್ಮ ‘ಕೂಚಿಪುಡಿ ಪರಂಪರಾ ಫೌಂಡೇಷನ್’ ಮೂಲಕ ನೃತ್ಯಾಭಿವೃದ್ಧಿಯ ಸಾಧನೆಯಲ್ಲಿ ನಿರತರಾಗಿ, ಪರಿಣಿತ ಅಭಿನಯ- ಮನೋಜ್ಞ ನೃತ್ಯಪ್ರಸ್ತುತಿಗಳಿಂದ ಕಲಾರಸಿಕರ ಗಮನ ಸೆಳೆದಿದ್ದಾರೆ. ಶಂಕರಾಭರಣ ಚಲನಚಿತ್ರ ಖ್ಯಾತಿಯ ಮಂಜುಭಾರ್ಗವಿ ಅವರ ಪ್ರಧಾನಶಿಷ್ಯರಾಗಿ ಅವರಲ್ಲಿ ಸತತ ಮೂವತ್ತು ವರುಷಗಳು ನಾಟ್ಯಶಿಕ್ಷಣ ಪಡೆದು ಗುರುಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅಗ್ಗಳಿಕೆ ಇವರದು.

    ಭಾರತ ನೃತ್ಯೋತ್ಸವದ ಪ್ರತೀಕವಾದ ‘ನಾಟ್ಯ ಪರಂಪರ ಉತ್ಸವ’ವು ಭಾರತ ಮಾತ್ರವಲ್ಲದೆ, ಯು.ಎಸ್., ರಷ್ಯಾ, ತೈವಾನ್, ಕೆನಡಾ ಮುಂತಾದೆಡೆಗಳ ಕುಚಿಪುಡಿ ಮತ್ತು ಇನ್ನಿತರ ನೃತ್ಯಶೈಲಿಗಳ ಖ್ಯಾತ ಕಲಾವಿದರ ನೃತ್ಯ ಪ್ರದರ್ಶನಗಳನ್ನು ಅರ್ಪಿಸುತ್ತ ಬಂದಿರುವುದು ಹೆಗ್ಗಳಿಕೆಯ ಸಂಗತಿ. ಈ ನೃತ್ಯೋತ್ಸವವು, ಕಲಾರಸಿಕರ ಬೆಂಬಲ-ಸಹಾಯದ ಜೊತೆಗೆ, ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಮತ್ತು ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂತಾದ ಸರ್ಕಾರಿ ಸಂಸ್ಥೆಗಳ ಆಶ್ರಯ-ಪ್ರೋತ್ಸಾಹಗಳನ್ನು ಪಡೆದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

    ಇದೀಗ ‘ನಾಟ್ಯ ಪರಂಪರ’ ಹದಿಮೂರನೆಯ ಆವೃತ್ತಿಯ ‘ನಾಟ್ಯ ಪರಂಪರಾ ಉತ್ಸವ – 2026ರ ಸಂಭ್ರಮಾಚರಣೆ ದಿನಾಂಕ 29 ಅಕ್ಟೋಬರ್ 2026ರ ಗುರುವಾರ ಸಂಜೆ 6-00 ಗಂಟೆಯಿಂದ ಬೆಂಗಳೂರಿನ ಮಲ್ಲೇಶ್ವರದ ಸೇವಾಸದನ ಸಭಾಂಗಣದಲ್ಲಿ ಅತ್ಯಂತ ವಿಜ್ರುಂಭಣೆಯಿಂದ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಕುಚಿಪುಡಿ ಕುಟುಂಬದ ಹಿರಿಯ ಕುಚಿಪುಡಿ ಗುರುಗಳಾದ ಗುರು ಮಹಾಂಕಾಳಿ ರಾಮಚಂದ್ರ ಮೂರ್ತಿ ಮತ್ತು ಬೆಂಗಳೂರಿನ ಭರತನಾಟ್ಯ ಕಲಾವಿದ ಶ್ರೀ ಚಾರ್ಲ್ಸ್ ಎಂ. ಇವರುಗಳ ಕಲಾ ಸೇವೆಯನ್ನು ಗುರುತಿಸಿ ಗೌರವಿಸಲಾಗುವುದು. ನಂತರ ಶ್ರೀಮತಿ ದೀಪಾ ಶಶೀಂದ್ರನ್ ಇವರ ಶಿಷ್ಯೆ ಐಶ್ವರ್ಯ ಕೆ.ಆರ್. ಇವರ ಕುಚಿಪುಡಿ ಏಕವ್ಯಕ್ತಿ ಪ್ರದರ್ಶನ ಮತ್ತು ಅಭಯ ಲಕ್ಷ್ಮಿ ಇವರಿಂದ ಒಡಿಸ್ಸಿ ಹಾಗೂ ಚೆನ್ನೈನ ಕುಚಿಪುಡಿ ಆರ್ಟ್ ಅಕಾಡೆಮಿಯಿಂದ ‘ಕಪಿಸೂತ್ರ’ ನೃತ್ಯರೂಪಕ ಪ್ರದರ್ಶನಗಳು ಕಲಾ ರಸಿಕರ ಕಣ್ಮನ ಸೂರೆಗೊಳ್ಳುವುದು. ಈ ನಯನ ಮನೋಹರವಾದ ಕಾರ್ಯಕ್ರಮವನ್ನು ಬೆಂಗಳೂರಿನ ಕೆ.ಪಿ.ಎಫ್. ಲೈಫ್ ಟ್ರಸ್ಟಿ, ಕುಚಿಪುಡಿ ನೃತ್ಯಜ್ಞೆ ಆಚಾರ್ಯ ದೀಪಾ ನಾರಾಯಣನ್ ಶಶೀಂದ್ರನ್ ಆಯೋಜಿಸಿದ್ದಾರೆ.

    ಬೆಂಗಳೂರಿನ ಈ ಕುಚಿಪುಡಿ ಪರಂಪರ ಫೌಂಡೇಷನ್ ಒಂದು ಲಾಭರಹಿತ ಪ್ರತಿಷ್ಠಾನವಾಗಿದ್ದು, ಇದರ ಲೈಫ್ ಟ್ರಸ್ಟಿಯಾದ ಕುಚಿಪುಡಿ ನೃತ್ಯಜ್ಞೆ ದೀಪಾ ನಾರಾಯಣನ್ ಶಶೀಂದ್ರನ್ ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರತಿಭಾನ್ವಿತ ಕಲಾವಿದರನ್ನು ಒಗ್ಗೂಡಿಸಿ, ಅವರಿಗೆ ವ್ಯವಸ್ಥಿತ ಕುಚಿಪುಡಿ ನೃತ್ಯ ತರಬೇತಿ ಮತ್ತು ನೃತ್ಯ ಸಂಯೋಜನೆಯನ್ನು ಬದ್ಧತೆಯಿಂದ ಕಲಿಸಿಕೊಡುವ ಅವಿರತ ಕೈಂಕರ್ಯ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಇಮೇಲ್: [email protected], ದೂರವಾಣಿ : 9845315272, ವೆಬ್‌ಸೈಟ್: www.kuchipudiparamparafoundation.com ಸಾಮಾಜಿಕ ಮಾಧ್ಯಮ : ಕುಚಿಪುಡಿ ಪರಂಪರಾ ಫೌಂಡೇಷನ್ ಯೂಟ್ಯೂಬ್ ಚಾನೆಲ್ ಮತ್ತು ಇನ್‌ಸ್ಟಾಗ್ರಾಮ್.

    *** ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    baikady dance Kuchipudi Music odissi roovari
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಪುರಭವನದಲ್ಲಿ ವಿದುಷಿ ಅಪೂರ್ವ ರಾವ್ ಇವರ ‘ಭರತನಾಟ್ಯ ರಂಗಪ್ರವೇಶ’ | ಅಕ್ಟೋಬರ್ 24
    Next Article ವಂದನೀಯ ಕ್ಲೆಮೆಂಟ್‌ ಮಸ್ಕರೇನ್ಹಸ್ ಇವರಿಗೆ 22ನೇ ‘ಕಲಾಕಾರ್‌ ಪುರಸ್ಕಾರ’ ಘೋಷಣೆ
    roovari

    Add Comment Cancel Reply


    Related Posts

    ಹಾ. ಮ. ಸತೀಶ ಇವರ ‘ಚಿಗರೆ’ ಗಜಲ್ ಸಂಕಲನ ಬಿಡುಗಡೆ | ಅಕ್ಟೋಬರ್ 25

    October 21, 2026

    ಸುಮಿತ್ರಾ ಗೌಡ ಇವರಿಗೆ ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ

    October 21, 2026

    ವಂದನೀಯ ಕ್ಲೆಮೆಂಟ್‌ ಮಸ್ಕರೇನ್ಹಸ್ ಇವರಿಗೆ 22ನೇ ‘ಕಲಾಕಾರ್‌ ಪುರಸ್ಕಾರ’ ಘೋಷಣೆ

    October 21, 2026

    ಮಂಗಳೂರಿನ ಪುರಭವನದಲ್ಲಿ ವಿದುಷಿ ಅಪೂರ್ವ ರಾವ್ ಇವರ ‘ಭರತನಾಟ್ಯ ರಂಗಪ್ರವೇಶ’ | ಅಕ್ಟೋಬರ್ 24

    October 21, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.