ಮಂಗಳೂರು : ಶ್ರೀ ಶಾರದಾ ನಾಟ್ಯಾಲಯ (ರಿ.) ಇವರು ಪ್ರಸ್ತುತ ಪಡಿಸುವ ಗುರು ವಿದುಷಿ ಭಾರತಿ ಸುರೇಶ್ ಇವರ ಶಿಷ್ಯೆ ವಿದುಷಿ ಅಪೂರ್ವ ರಾವ್ ಇವರ ‘ಭರತನಾಟ್ಯ ರಂಗಪ್ರವೇಶ’ವು ದಿನಾಂಕ 24 ಅಕ್ಟೋಬರ್ 2026ರಂದು ಸಂಜೆ 5-00ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾಶ್ರೀ ಗುರು ಉಳ್ಳಾಲ ಮೋಹನ್ ಕುಮಾರ್, ಸನಾತನ ನಾಟ್ಯಾಲಯದ ಗುರು ವಿದುಷಿ ಶಾರದಾಮಣಿ ಶೇಖರ್, ಶ್ರೀ ಪ್ರಭಾಕರ್ ಶೆಟ್ಟಿ, ಶ್ರೀ ನಾಗೇಶ್ ಎ. ಬಪ್ಪನಾಡು ಮತ್ತು ಶ್ರೀ ಹರೀಶ್ ಪೂಂಜಾ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಭರತನಾಟ್ಯ ಕಾರ್ಯಕ್ರಮಕ್ಕೆ ನಟುವಾಂಗಂನಲ್ಲಿ ಗುರು ವಿದುಷಿ ಭಾರತಿ ಸುರೇಶ್ ಮತ್ತು ವಿದುಷಿ ಚಿನ್ಮಯಿ ಸುರೇಶ್, ಹಾಡುಗಾರಿಕೆಯಲ್ಲಿ ವಿದ್ವಾನ್ ವಿನೀತ್ ಪುರವಂಕರ, ಮೃದಂಗದಲ್ಲಿ ವಿದ್ವಾನ್ ವಿಕ್ರಮ್ ಭಾರದ್ವಾಜ್, ಕೊಳಲು ವಿದ್ವಾನ್ ಕೆ. ಮುರಳೀಧರ ಉಡುಪಿ, ವೀಣೆಯಲ್ಲಿ ವಿದ್ವಾನ್ ಸೌಂದರ ರಾಜನ್ ಮತ್ತು ರಿದಂ ಪ್ಯಾಡ್ ನಲ್ಲಿ ವಿದ್ವಾನ್ ಕಾರ್ತಿಕ್ ಭಟ್ ಇನ್ನಂಜೆ ಇವರುಗಳು ಸಹಕರಿಸಲಿದ್ದಾರೆ.

