Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಎಂ.ವಿ. ಸೂರಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ | ಮೇ 16

    May 13, 2026

    ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆ

    May 13, 2026

    ನೃತ್ಯ ವಿಮರ್ಶೆ | ದೈವೀಕ ಸಾಕ್ಷಾತ್ಕಾರದ ಗೌರಿ ಕೃಷ್ಣಳ ಸಾತ್ವಿಕಾಭಿನಯ

    May 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಲಲಿತಕಲಾ ಅಕಾಡೆಮಿಯ ಗೌರವ, ವರ್ಣಶ್ರೀ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟ
    Awards

    ಲಲಿತಕಲಾ ಅಕಾಡೆಮಿಯ ಗೌರವ, ವರ್ಣಶ್ರೀ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟ

    May 2, 2026Updated:May 5, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕರ್ನಾಟಕ ಲಲಿತಕಲಾ ಅಕಾಡೆಮಿಯು 2024-25 ಮತ್ತು 2025-26ನೇ ಸಾಲಿನ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಹಾಗೂ ವರ್ಣಶ್ರೀ ಪ್ರಶಸ್ತಿ ಪ್ರಕಟಿಸಿದ್ದು, ವರ್ಷಕ್ಕೆ ತಲಾ 3 ಪ್ರಶಸ್ತಿಗಳಂತೆ 2024-25 ಮತ್ತು 2025-26 ಸಾಲುಗಳಿಗೆ ಸಂಬಂಧಿಸಿದಂತೆ 6 ಗೌರವ ಪ್ರಶಸ್ತಿ ಮತ್ತು ವರ್ಷಕ್ಕೆ ತಲಾ 10 ಪ್ರಶಸ್ತಿಗಳಂತೆ 2023-24 ಹಾಗೂ 2024-25ನೇ ಸಾಲುಗಳಿಗೆ ಸಂಬಂಧಿಸಿದಂತೆ ಒಟ್ಟು 20 ವರ್ಣಶ್ರೀ ಪ್ರಶಸ್ತಿ ಹಾಗೂ 2024-25ನೇ ಸಾಲಿನ 53ನೇ ವಾರ್ಷಿಕ ಕಲಾ ಬಹುಮಾನಕ್ಕೆ 10 ಕಲಾವಿದರನ್ನ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ತಿಳಿಸಿದ್ದಾರೆ. ರಾಜ್ಯದ ಚಿತ್ರಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರಿಗೆ ತಲಾ ರೂ.50,000/- ನಗದಿನೊಂದಿಗೆ ಗೌರವ ಪ್ರಶಸ್ತಿ, ತಲಾ ರೂ.25,000/- ನಗದಿನೊಂದಿಗೆ ವರ್ಣಶ್ರೀ ಪುರಸ್ಕಾರ ಹಾಗೂ ವಾರ್ಷಿಕ ಕಲಾ ಪ್ರದರ್ಶನದ 10 ಉತ್ತಮ ಕಲಾಕೃತಿಗಳಿಗೆ ತಲಾ ರೂ.25,000/- ನಗದು ಬಹಮಾನವನ್ನು ನೀಡಿ ಗೌರವಿಸಲಾಗುವುದು.

    2024-25ನೇ ಸಾಲಿನಲ್ಲಿ ಗೌರವ ಪ್ರಶಸ್ತಿಗೆ ಬಾಗಲಕೋಟೆಯ ಬಾಬು ಜತ್ತಕರ್‌, ಕಲಬುರಗಿಯ ಎಂ.ಜಿ. ದೊಡ್ಡಮನಿ ಹಾಗೂ ತುಮಕೂರಿನ ಕೆ.ಸಿ.ಎಸ್. ಪ್ರಸನ್ನ ಇವರು ಭಾಜನರಾಗಿದ್ದರೆ 2025-26ನೇ ಸಾಲಿನ ಗೌರವ ಪ್ರಶಸ್ತಿಗೆ ಹಾಸನದ ಬಿ.ಎಸ್. ದೇಸಾಯಿ, ವಿಜಯಪುರದ ಡಾ. ಶಶಿಕಲಾ ಹೂಗಾ‌ರ್ ಹಾಗೂ ಮೈಸೂರಿನ ಸಿ. ಚಿಕ್ಕಣ್ಣ ಇವರನ್ನು ಆಯ್ಕೆ ಮಾಡಲಾಗಿದೆ.

    2023-24ನೇ ಸಾಲಿನ ವರ್ಣಶ್ರೀ ಪ್ರಶಸ್ತಿಗೆ ಗದಗದ ವಿಜಯ ಕಿರಸೂರ, ಶಿರಸಿಯ ರವಿ ಗುಣಗ, ಹಾವೇರಿಯ ಕುಮಾರ ಕಾಟೇನಹಳ್ಳಿ, ಧಾರವಾಡದ ದಯಾನಂದ ಕೆ. ಕಾಮಕರ್, ವಿಜಯಪುರದ ಸರೋಜ ಮುಂಡೇವಾಡಿ, ಕೊಡಗಿನ ಜಿ.ಎಸ್. ಭವಾನಿ, ಉಡುಪಿಯ ರಾಘವೇಂದ್ರ ನಾಯ್ಕ, ಮಂಡ್ಯದ ಶಿವಕುಮಾರ್ ಹೆಚ್., ಮಂಗಳೂರಿನ ಮೋಹನ್ ಕುಮಾರ್ ಬಿ.ಪಿ. ಹಾಗೂ ಚಾಮರಾಜನಗರದ ಮಹದೇವ ಹೆಜ್. ಭಾಜನರಾಗಿದ್ದಾರೆ.

    2024-25ನೇ ಸಾಲಿನ ವರ್ಣಶ್ರೀ ಪ್ರಶಸ್ತಿಗೆ ಯಾದಗಿರಿಯ ಮೇಘನಾಥ ಅಬ್ರಾಹಂ ಬೆಳ್ಳಿ, ರಾಯಚೂರಿನ ಹೇಮರೆಡ್ಡಿ ಎನ್., ಬೀದರ್ ನ ಡಾ. ವೈಶಾಲಿಬಾಯಿ ಕಾಂಬಳೆ, ಕೊಪ್ಪಳದ ತಿರುಪತಿ ಶಿವನಗುತ್ತಿ, ಬಳ್ಳಾರಿಯ ಎ. ಮಹಮದ್‌ ರಫಿ, ದಾವಣಗೆರೆಯ ಉದಯ್ ಕುಮಾರ್ ಡಿ. ಜೈನ್, ಚಿತ್ರದುರ್ಗದ ದಿನೇಶ್ ಬಿ., ಬೆಂಗಳೂರಿನ ಎಸ್.ಎಫ್. ಹುಸೇನಿ, ರಾಮನಗರದ ಗಂಗಾಧರ ಮೂರ್ತಿ ಹಾಗೂ ಬೆಂಗಳೂರಿನ ಪೂರ್ಣಿಮ ಯಲ್ಲಾಪುರಕರ್ ಆಯ್ಕೆಯಾಗಿದ್ದಾರೆ.

    2024-25ನೇ ಸಾಲಿನ ವಾರ್ಷಿಕ ಕಲಾ ಬಹುಮಾನಕ್ಕೆ ಧಾರವಾಡದ ಅಶೋಕ ಬಿ. ಮನಸೂರ, ಬೀದರ್ ನ ಸಂದೀಪ ಸಜ್ಜನ ಶೆಟ್ಟಿ, ಉಡುಪಿಯ ಹರೀಶ್ ನಾಯ್ಕ, ಬೆಂಗಳೂರಿನ ಅಕ್ಷಯ್ ಭಟ್, ಬೆಂಗಳೂರಿನ ಲೋಹಿತ್ ಪತ್ತಾರ, ಬಾಗಲಕೋಟೆಯ ನೂರ್ಜಾನ ಎಂ. ದಫೇದಾರ, ದಕ್ಷಿಣ ಕನ್ನಡದ ಜೀವನ್ ಸಾಲಿಯಾನ್, ಕಲಬುರಗಿಯ ಜಲಜಾಕ್ಷಿ ಕುಲಕರ್ಣಿ, ಕಲಬುರಗಿಯ ಮೀನಾಕ್ಷಿ ಹಾಗೂ ಬೆಳಗಾವಿಯ ದುಂಡಪ್ಪಾ ಎಸ್. ಲೋಲಸೂರಿ ಇವರ ಕಲಾಕೃತಿಗಳು ಆಯ್ಕೆಯಾಗಿವೆ.

    award baikady drawing roovari
    Share. Facebook Twitter Pinterest LinkedIn Tumblr WhatsApp Email
    Previous Articleಸೌಹಾರ್ದ ಸಾಹಿತ್ಯ ವೇದಿಕೆ ಮಂಗಳೂರು ಘಟಕದಿಂದ ‘ಕನ್ನಡದ ಕಂಪು ಸರಣಿ -9’ | ಮೇ 03
    Next Article ಹಿರಿಯ ನಾಟಕ ಕಲಾವಿದ ಕೆ.ಕೆ. ಗಟ್ಟಿಯವರಿಗೆ ತುಳು ಅಕಾಡೆಮಿಯ ಚಾವಡಿ ತಮ್ಮನ
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ಎಂ.ವಿ. ಸೂರಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ | ಮೇ 16

    May 13, 2026

    ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆ

    May 13, 2026

    ನೃತ್ಯ ವಿಮರ್ಶೆ | ದೈವೀಕ ಸಾಕ್ಷಾತ್ಕಾರದ ಗೌರಿ ಕೃಷ್ಣಳ ಸಾತ್ವಿಕಾಭಿನಯ

    May 13, 2026

    ಬಾಲ್ಯದಿಂದಲೇ ಅಭಿರುಚಿ ಬೆಳೆಸಿಕೊಳ್ಳಬೇಕು – ಡಾ. ಯಶವಂತ ಎನ್. ನಾಯಕ್

    May 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.