ಮಂಗಳೂರು : ಸೌಹಾರ್ದ ಸಾಹಿತ್ಯ ವೇದಿಕೆ ಹುಬ್ಬಳ್ಳಿ ಇದರ ಮಂಗಳೂರು ಘಟಕದ ವತಿಯಿಂದ ಮಂಗಳೂರಿನ ಕವಿ ಮನದವರಿಗೆ ‘ಕನ್ನಡದ ಕಂಪು ಸರಣಿ -9’ ಮಾಲಿಕೆಯ ಅಡಿಯಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಬರೆದ ಕವನಗಳ ವಾಚನ ಮತ್ತು ವಿಚಾರ ಸಂಕಿರಣವನ್ನು ದಿನಾಂಕ 03 ಮೇ 2026ರಂದು ಸಂಜೆ 3-00 ಗಂಟೆಗೆ ಮಂಗಳೂರು ಪಬ್ಬಾಸ್ ಹತ್ತಿರ ಲಾಲ್ ಭಾಗ್ 1ನೇ ಮಹಡಿ ಲಕ್ಷ್ಮಿಶೇಷಾ ಅಪಾರ್ಟ್ಮೆಂಟ್ ಇಲ್ಲಿ ಆಯೋಜಿಲಾಗಿದೆ.
ಕವಿಗಳಾದ ಜಯಶ್ರೀ ಶೆಣೈ, ನಿರೀಕ್ಷಿತ, ಮೂಗಪ್ಪ ಗಾಳೇರ, ರೇಖಾ ಸುದೇಶ್ ರಾವ್, ಸುಲೋಚನಾ ನವೀನ್, ಆರ್.ಎಂ. ಗೋಗೇರಿ, ಡಾ. ಸುರೇಶ್ ನೆಗಳಗುಳಿ, ಆಕೃತಿ ಐ.ಎಸ್. ಭಟ್, ಸರ್ವ ಅರಸ ಶೆಟ್ಟಿ, ಅರುಣಾ ನಾಗರಾಜ್, ಬಿ.ಎಮ್. ಆಕಾಶ ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

