ಉಡುಪಿ : ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಶೀರೂರು ಮಠ ಉಡುಪಿ, ಗಾಂಧಿ ಆಸ್ಪತ್ರೆ ಉಡುಪಿ, ಪಂಚಮಿ ಟ್ರಸ್ಟ್ ಮತ್ತು ಪಂಚಲಹರಿ ಫೌಂಡೇಶನ್ ಸಹಯೋಗದೊಂದಿಗೆ ‘ನಾದ ಗಂಗಾ ಲಹರಿ’ ವಯಲಿನ್ ವಾದನ ಕಾರ್ಯಕ್ರಮವನ್ನು ದಿನಾಂಕ 05 ಮೇ 2026ರಂದು ಸಂಜೆ ಗಂಟೆ 7-15ಕ್ಕೆ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಛೇರಿಯನ್ನು ಪ್ರಖ್ಯಾತ ಬಾಲಪ್ರತಿಭೆ ಕುಮಾರಿ ಗಂಗಾ ಶಶಿಧರನ್ ಇವರು ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ವ್ಯಾಸರಾಜ ತಂತ್ರಿ ಇವರಿಂದ ‘ಬಹುಚಿತ್ರ ಜಗತ್’ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.

