ಮಂಗಳೂರು : ಇತ್ತೀಚೆಗೆ ನಿಧನರಾದ ಹವ್ಯಾಸಿ ಯಕ್ಷಗಾನ ಕಲಾವಿದ, ಹಿರಿಯ ತಾಳಮದ್ದಳೆ ಅರ್ಥಧಾರಿ ಪಿ. ಪ್ರಭಾಕರ ಕಾಮತ್ ಇವರ ಗೌರವಾರ್ಥ ‘ ಪ್ರಭಾಕರ ಯಕ್ಷ-ನಮನ’ ಕಾರ್ಯಕ್ರಮವನ್ನು ದಿನಾಂಕ 04 ಮೇ 2026ರಂದು ಮಂಗಳೂರು ವಿಠೋಬಾ ದೇವಸ್ಥಾನ ರಸ್ತೆಯಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ರಥಬೀದಿಯ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ, ಉರ್ವ ಶಾರದಾಂಬಾ ಯಕ್ಷಗಾನ ಮಂಡಳಿ, ಜಗದಂಬಾ ಯಕ್ಷಗಾನ ಮಂಡಳಿ, ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಸಕ್ರಿಯ ಸದಸ್ಯನಾಗಿ ಅನೇಕ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಯಾವುದೇ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದ ಸರಳ ಸಜ್ಜನಿಕೆಯ ಪ್ರಭಾಕರ ಕಾಮತ್ ಅವರ ಗೌರವಾರ್ಥ ಅವರು ಸಕ್ರಿಯರಾಗಿದ್ದ ಮಂಗಳೂರಿನ ಶ್ರೀ ಜಗದಂಬಾ ಯಕ್ಷಗಾನ’ ಮಂಡಳಿ ಉರ್ವ ಇವರಿಂದ ‘ವಾಲಿ ಮೋಕ್ಷ’, ರಥಬೀದಿಯ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದವರಿಂದ ‘ಅತಿಕಾಯ ಮೋಕ್ಷ’ ಹಾಗೂ ಪಾಂಡೇಶ್ವರದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಇವರಿಂದ ‘ಸುಧನ್ವ ಮೋಕ್ಷ’ ತಾಳಮದ್ದಳೆ ಕಾರ್ಯಕ್ರಮ ಜರಗಲಿರುವುದು. ಇದೇ ಸಂದರ್ಭದಲ್ಲಿ ಅಪರಾಹ್ನ 1-00ರಿಂದ 2-00ರವೆರೆಗೆ ನುಡಿ ನಮನ ಕಾರ್ಯಕ್ರಮ ನಡೆಯಲಿದೆ.

