ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತಿಂಗಳ ಸರಣಿ ತಾಳಮದ್ದಳೆ ದಿನಾಂಕ 04 ಮೇ 2026ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ರಾಜಗೋಪುರದಲ್ಲಿ ‘ಜಾಂಬವತಿ ಕಲ್ಯಾಣ’ ಆಖ್ಯಾನದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಶ್ರೀಗಳಾದ ಕುಸುಮಕರ ಆಚಾರ್ಯ ಹಳೆನೇರೆಂಕಿ, ನಿತೀಶ್ ಕುಮಾರ್ ಎಂಕಣ್ಣ ಮೂಲೆ, ಪದ್ಯಾಣ ಜಯರಾಮ್ ಭಟ್, ಸಮರ್ಥ ವಿಷ್ಣು ಕಡಂಬಳಿಕೆ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ (ಭಾಸ್ಕರ್ ಬಾರ್ಯ ಮತ್ತು ಭಾಸ್ಕರ್ ಶೆಟ್ಟಿ ಸಾಲ್ಮರ), ಜಾಂಬವ (ಗುಡ್ಡಪ್ಪ ಬಲ್ಯ), ಬಲರಾಮ (ಜಯರಾಮ್ ಭಟ್ ದೇವಸ್ಯ), ನಾರದ (ದಿವಾಕರ್ ಆಚಾರ್ಯ ಗೇರುಕಟ್ಟೆ) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು.
