Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಮಹಾಲಿಂಗೇಶ್ವರ ದೇವಳದ ರಾಜಗೋಪುರದಲ್ಲಿ ತಿಂಗಳ ಸರಣಿ ತಾಳಮದ್ದಳೆ

    May 5, 2026

    ಪ್ರಖ್ಯಾತ ಬಾಲಪ್ರತಿಭೆ ಕುಮಾರಿ ಗಂಗಾ ಶಶಿಧರನ್ ಇವರಿಂದ ‘ನಾದ ಗಂಗಾ ಲಹರಿ’ | ಮೇ 05 

    May 4, 2026

    ಶಿವಮೊಗ್ಗದ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ‘ಸಂಸ್ಥಾಪನಾ ದಿನಾಚರಣೆ’ | ಮೇ 05

    May 4, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಹಿರಿಯ ನಾಟಕ ಕಲಾವಿದ ಕೆ.ಕೆ. ಗಟ್ಟಿಯವರಿಗೆ ತುಳು ಅಕಾಡೆಮಿಯ ಚಾವಡಿ ತಮ್ಮನ
    Felicitation

    ಹಿರಿಯ ನಾಟಕ ಕಲಾವಿದ ಕೆ.ಕೆ. ಗಟ್ಟಿಯವರಿಗೆ ತುಳು ಅಕಾಡೆಮಿಯ ಚಾವಡಿ ತಮ್ಮನ

    May 2, 2026Updated:May 5, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ದಿನಾಂಕ 26 ಏಪ್ರಿಲ್ 2026ರಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಾಟಕಕಾರ ಕೆ.ಕೆ. ಗಟ್ಟಿ ಇವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಚಾವಡಿ ತಮ್ಮನದ ಗೌರವ ಸಮರ್ಪಣೆ ನಡೆಯಿತು.

    ಚಾವಡಿ ತಮ್ಮನ ಗೌರವವನ್ನು ಪ್ರಧಾನ ಮಾಡಿದ ಶ್ರೀ ಕ್ಷೇತ್ರ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕ ಶರವು ರಾಘವೇಂದ್ರ ಶಾಸ್ತ್ರಿಯವರು ಮಾತನಾಡಿ “ಕೆ.ಕೆ. ಗಟ್ಟಿಯವರ ನಾಟಕಗಳಲ್ಲಿ ಒಳ್ಳೆಯ ಸಾಮಾಜಿಕ ಮೌಲ್ಯದ ಸಂದೇಶಗಳಿವೆ. ಅವರು ಅನೇಕ ಹೊಸ ಕಲಾವಿದರನ್ನು ರಂಗಕ್ಕೆ ತಂದಿದ್ದಾರೆ. ಅರವಿಂದ ಬೋಳಾರ್ ಅವರಂತಹ ಪ್ರಸಿದ್ದ ನಟರನ್ನು ರಂಗಭೂಮಿಗೆ ತಂದಂತಹ ಹೆಗ್ಗಳಿಕೆ ಕೆ.ಕೆ. ಗಟ್ಟಿಯವರದ್ದು” ಎಂದು ಹೇಳಿದರು.

    ಸಮಾರಂಭದಲ್ಲಿ ಖ್ಯಾತ ನಟ ಅರವಿಂದ ಬೋಳಾರ್ ಮಾತನಾಡಿ, “ನಾನು ರಂಗಭೂಮಿಯಲ್ಲಿ ಪ್ರಸಿದ್ಧಿ ಪಡೆಯಲು ಮೂಲ ಕಾರಣ ಶ್ರೀ ಶರವು ಕ್ಷೇತ್ರ ಹಾಗೂ ಶರವು ಕ್ಷೇತ್ರದಲ್ಲಿ ನನ್ನನ್ನು ನಾಟಕ ರಂಗಕ್ಕೆ ಪರಿಚಯಿಸಿದ ಕೆ.ಕೆ. ಗಟ್ಟಿಯವರು ನನ್ನ ರಂಗಭೂಮಿಯ ಮೊದಲ ಗುರುಗಳು” ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, “49 ವರ್ಷಗಳ ಹಿಂದೆ ಶ್ರೀಸೋಮನಾಥ ಕಲಾ ಭೂಮಿ ರಂಗಸಂಸ್ಥೆಯನ್ನು ಆರಂಭಿಸಿ 50ಕ್ಕೂ ಹೆಚ್ಚು ನಾಟಕಗಳನ್ನು ಬರೆದು ನಿರ್ದೇಶನ ಮಾಡಿದ ಕೆ.ಕೆ.ಗಟ್ಟಿಯವರ ರಂಗಭೂಮಿ ಸೇವೆ ಅನನ್ಯವಾದದ್ದು” ಎಂದು ಬಣ್ಣಿಸಿದರು.

    ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಶ್ರೀಸೋಮನಾಥ ಸೇವಾ ಸಮಿತಿಯ ಅಧ್ಯಕ್ಷ ಜಯರಾಮ ಗಟ್ಟಿ ಪಿಲಾರ್ ಶುಭಕೋರಿ ಮಾತನಾಡಿದರು. ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ಕಾರ್ಯಕ್ರಮ ನಿರೂಪಿಸಿ, ಕಲಾವಿದ ವಸಂತ ರೈ ಬಿ.ಕೆ. ಸ್ವಾಗತಿಸಿ, ವಂದಿಸಿದರು.

    baikady felicitation roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಲಲಿತಕಲಾ ಅಕಾಡೆಮಿಯ ಗೌರವ, ವರ್ಣಶ್ರೀ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟ
    Next Article ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ‘ಪ್ರಭಾಕರ ಯಕ್ಷ ನಮನ’ | ಮೇ 04
    roovari

    Add Comment Cancel Reply


    Related Posts

    ಶ್ರೀ ಮಹಾಲಿಂಗೇಶ್ವರ ದೇವಳದ ರಾಜಗೋಪುರದಲ್ಲಿ ತಿಂಗಳ ಸರಣಿ ತಾಳಮದ್ದಳೆ

    May 5, 2026

    ಪ್ರಖ್ಯಾತ ಬಾಲಪ್ರತಿಭೆ ಕುಮಾರಿ ಗಂಗಾ ಶಶಿಧರನ್ ಇವರಿಂದ ‘ನಾದ ಗಂಗಾ ಲಹರಿ’ | ಮೇ 05 

    May 4, 2026

    ಶಿವಮೊಗ್ಗದ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ‘ಸಂಸ್ಥಾಪನಾ ದಿನಾಚರಣೆ’ | ಮೇ 05

    May 4, 2026

    ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಅಭಿರಾಮ ಧಾಮದ ವಸಂತ ಶಿಬಿರ ಯಶಸ್ವಿ !

    May 2, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.