ಆಂಧ್ರಪ್ರದೇಶ : ತ್ರಿವರ್ಣ ಪ್ರತಿಷ್ಠಾನ ಇವರ ವತಿಯಿಂದ ‘ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ದಿನಾಂಕ 10 ಅಕ್ಟೋಬರ್ 2026ರಂದು ಆಂಧ್ರಪ್ರದೇಶ ಅನಂತಪುರದ ಗೀತಾ ಮಂದಿರದಲ್ಲಿ ಆಯೋಜಿಸಲಾಗಿದೆ. ಪುಸ್ತಕಗಳ ಬಿಡುಗಡೆ, ಪ್ರಶಸ್ತಿ ಪ್ರದಾನ, ರಾಷ್ಟ್ರೀಯ ಕವಿಗೋಷ್ಠಿ, ಗಮಕ ಗೋಷ್ಠಿ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದ್ವಿಭಾಷಾ ಕವಿ ಪೊಟ್ಲೂರಿ ಹರಿಕೃಷ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭವನ್ನು ಪರಮಪೂಜ್ಯ ಶ್ರೀ ಶ್ರೀವಿದ್ಯಾ ನೃಸಿಂಹ ಭಾರತೀ ಸ್ವಾಮೀಜೀಗಳವರು ಉದ್ಘಾಟನೆ ಮಾಡಲಿದ್ದಾರೆ. ಎಸ್.ವಿ. ಶಾಂತಕುಮಾರ ಇವರ ‘ಕಾಲನ ಕನ್ನಡಿ’, ಆರ್. ಶೈಲಜಾಬಾಬು ಇವರ ‘ಆನಂತರ ಹೆಜ್ಜೆಗಳು’, ಕುಮಾರಿ ರೇಣುಕಾ ಮಾದರ ಇವರ ‘ಕಣ್ಣಂಚಿನ ಕಾವ್ಯ’, ಸಿದ್ದೇಶ್ ಸಿದ್ದನಮಠ ಇವರ ‘ ಬದುಕಿನ ಕನ್ನಡಿ’, ನವೀದ್ ಮುಲ್ಲಾ ಇವರ ‘ಕಾವ್ಯ ಸುಧೆ’, ಸುರೇಶ ಮಲ್ಲಾಡದ ಇವರ ‘ಮಲ್ಲಾಡದ ಸಹಸ್ರ ಚುಟುಕುಗಳು’, ಬಿ.ಎಂ. ಪ್ರಿಯಾಂಕ ಇವರ ‘ಸ್ನಿಗ್ಧಪ್ರಿಯಾ’, ಡಾ. ರಾಜರಾಜೇಶ್ವರಿ ಎಸ್.ಪಿ. ಇವರ ‘ಭಾವತರಂಗಿಣಿ’ ಮತ್ತು ತುಂತುರು’ ಹಾಗೂ ಕೆ.ಎನ್. ಚಿದಾನಂದ ಇವರ ‘ಸತ್ಯದ ಸಿರಿವಂತಿಕೆ’ ಬಿಡಗಡೆ ಹಾಗೂ ಪ್ರಸಿದ್ಧ ಹಾಗೂ ಸಂವೇದನಾಶೀಲ ಸಾಹಿತಿ ಶಂಕರ ಬೈಚಬಾಳ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.

