ತೆಕ್ಕಟ್ಟೆ : ತಾಳಮದ್ದಳೆಯನ್ನು ಹೋಲುವ ‘ಹೂವಿನಕೋಲು’ ಕಲಾ ಪ್ರಕಾರ ಬಹಳ ಹಿಂದಿನದ್ದು. ಪ್ರಸ್ತುತ ಕಾಲಘಟ್ಟದಲ್ಲಿ ಕಣ್ಮರೆಯಾದ ಸಂದರ್ಭದಲ್ಲಿ ಕೊಮೆ ತೆಕ್ಕಟ್ಟೆಯ ಯಶಸ್ವಿ ಕಲಾವೃಂದ ಮಕ್ಕಳ ತಂಡವೊಂದನ್ನು ಕಟ್ಟಿಕೊಂಡು ಹಲವಾರು ವರ್ಷಗಳಿಂದ ಆಯ್ದ ಕೆಲವು ಮನೆಗಳಲ್ಲಿ ಸಾಂಪ್ರದಾಯಿಕವಾದ ಕಲೆಯನ್ನು ಹೊತ್ತು ಕರಾವಳಿಯುದ್ದಕ್ಕೂ ನಡೆಸುತ್ತಿದೆ. ಒಂದೊಂದು ಮನೆಗಳಲ್ಲಿ ಕೇವಲ ಹದಿನೈದು ನಿಮಿಷದಲ್ಲಿ ಮುಗಿಯುವ ಈ ಕಾರ್ಯಕ್ರಮವನ್ನು ದಿನಾಂಕ 11 ಅಕ್ಟೋಬರ್ 2026ರಿಂದ 21 ಅಕ್ಟೋಬರ್ 2026ರವರೆಗೆ ದಿನವಿಡೀ ಸಂಪರ್ಕಿಸಿ ಕಾರ್ಯಕ್ರಮಕ್ಕೆ ನೆರವೇರಿಸಲು ಸಜ್ಜಾಗಿದೆ. ಹತ್ತು ಮಕ್ಕಳನ್ನೊಳಗೊಂಡ ಎರಡು ತಂಡ ಆಸಕ್ತರ ಮನೆಗಳಿಗೆ ತೆರಳುವುದಕ್ಕೆ ಅನುವಾಗಿದೆ. ಕಲಾಸಕ್ತ ಬಂಧುಗಳು ಶರನ್ನವರಾತ್ರಿಯ ಸಂದರ್ಭದಲ್ಲಿ ತಮ್ಮ ಮನೆಯಲ್ಲೂ ಕಾರ್ಯಕ್ರಮ ನೆರವೇರಿಸಿ, ಪ್ರೋತ್ಸಾಹಿಸಲು 9944947771ಕ್ಕೆ ಸಂಪರ್ಕಿಸಬಹುದು ಎಂದು ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ ತಿಳಿಸಿದ್ದಾರೆ.

