ಬೆಂಗಳೂರು : ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ‘ಕಾವ್ಯಾನಂದ ಪುರಸ್ಕಾರ’ಕ್ಕೆ ಕೃತಿಗಳನ್ನು ಆಹ್ವಾನಿಸಿದೆ. 2024 ಹಾಗೂ 2025ರಲ್ಲಿ ಪ್ರಕಟಗೊಂಡ ನಾಟಕ ಅಥವಾ ನಾಟಕದ ವಿಮರ್ಶೆಗೆ ಸಂಬಂಧಿಸಿದ ಕೃತಿಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುತ್ತದೆ. ಈ ಪುರಸ್ಕಾರವು ರೂ. ಐವತ್ತು ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.
ಆಸಕ್ತರು, ಕೃತಿಯ ಮೂರು ಪ್ರತಿಗಳನ್ನು ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್, ಶ್ರೀಗಿರಿ, 4/5ಎ, ಅಲಿ ಅಸ್ಕರ್ ರಸ್ತೆ, ಬೆಂಗಳೂರು -560052 ಈ ವಿಳಾಸಕ್ಕೆ ಜೂನ್ 30ರೊಳಗೆ ಕಳುಹಿಸುವಂತೆ ಟ್ರಸ್ಟಿನ ಅಧ್ಯಕ್ಷೆ ವಿಜಯಾ ನಂದೀಶ್ವರ ತಿಳಿಸಿದ್ದಾರೆ. ಮಾಹಿತಿಗೆ 080-22264361 ಸಂಖ್ಯೆಯನ್ನು ಸಂಪರ್ಕಿಸಿರಿ.
