ಖ್ಯಾತ ‘ಉಷ್ಷಸ್ ಫೌಂಡೇಶನ್’ ನೃತ್ಯಸಂಸ್ಥೆಯ ಕಲಾತ್ಮಕ ನಿರ್ದೇಶಕಿ, ಗುರು, ಕಲೈಮಾಮಣಿ ಡಾ. ಸಂಗೀತಾ ಕಬಿಲನ್ ಭರತನಾಟ್ಯ ಪ್ರವೀಣೆ ತಮ್ಮ ಹರಿತವಾದ ನೃತ್ತಗಳಿಗೆ ಮತ್ತು ಪ್ರೌಢವಾದ ಸುಂದರ ಅಭಿನಯಕ್ಕೆ ಹೆಸರಾದವರು. ಕ್ರಿಯಾಶೀಲರಾಗಿರುವ ಇವರು, ಏನಾದರೊಂದು ಹೊಸ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ರೂಪಿಸುವುದು ಇವರ ಪರಿಪಾಠ. ಅದರಂತೆ ಅವರು, ದಿನಾಂಕ 08 ಮತ್ತು 09 ಆಗಸ್ಟ್ 2026ರ ಭಾನುವಾರ ಸಂಜೆ 5-00 ಗಂಟೆಗೆ ಬೆಂಗಳೂರಿನ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ವಿಶಿಷ್ಟ ಸಂಗೀತ ಮತ್ತು ನೃತ್ಯ ಮೇಳಗಳ ‘ಕಬಿಲನ್ ನೃತ್ಯೋತ್ಸವ-ಸ್ವಪ್ನಗಳ ಅನಾವರಣ’ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಚಿರಸ್ಮರಣೀಯವಾದ ‘ಕಬಿಲನ್ ಉತ್ಸವ 2026’ರ ನೃತ್ಯೋತ್ಸವದಲ್ಲಿ ದೇಶದ ಖ್ಯಾತ ಕಲಾವಿದರ ಅದ್ಭುತ ಪ್ರದರ್ಶನಗಳನ್ನು ವೀಕ್ಷಿಸಲು ಸದವಕಾಶ.
ದಿನಾಂಕ 08 ಆಗಸ್ಟ್ 2026ರಂದು ಕಾರ್ಯಕ್ರಮದ ಪ್ರಥಮ ದಿನ ಕಲೈಮಾಮಣಿ ಶ್ರೀಮತಿ ಅನಿತಾ ಗುಹಾ ಹಾಗೂ ತಂಡ ‘ಪಾರಿಷ್ವಂಗ ಪಟ್ಟಾಭಿಷೇಕಂ’ – ರಾಮಾಯಣದ ಮನಮೋಹಕ ಘಟನೆಯೊಂದನ್ನು ಆಧರಿಸಿದ ಕಥೆಗೆ ಭಾವಪೂರ್ಣ ನೃತ್ಯ ಸಂಯೋಜನೆ, ಮನಸೂರೆಗೊಳ್ಳುವ ಸಂಗೀತ ಹಾಗೂ ಅಭಿವ್ಯಕ್ತಿಪೂರ್ಣ ಕಥನದ ಮೂಲಕ ಅನಾವರಣಗೊಳಿಸುವ ಅದ್ಭುತ ಭರತನಾಟ್ಯ ನೃತ್ಯರೂಪಕ. ಅನಂತರ ಶ್ರೀ ಹರಿ – ಕಥಕ್ ನೃತ್ಯ, ವಿದುಷಿ ಪದ್ಮಿನಿ ಎಸ್. ಉಪಾಧ್ಯ – ಭರತನಾಟ್ಯ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ಕಲಾಶ್ರೀ ಶ್ರೀಮತಿ ಶುಭಾ ಧನಂಜಯ್ ಇವರು ಭಾಗವಹಿಸಲಿದ್ದಾರೆ.

ದಿನಾಂಕ 09 ಆಗಸ್ಟ್ 2026ರಂದು ಸಂಜೆ 5-00 ಗಂಟೆಗೆ ಅಭಿಜಿತ್ ಪಿ.ಎಸ್. ನಾಯರ್ ಇವರಿಂದ ಫ್ಯೂಷನ್ ವಯೋಲಿನ್ ಸಂಗೀತ ಕಛೇರಿ. ಕಲೈಮಾಮಣಿ ಶ್ರೀಮತಿ ಕಾಯಲ್‌ವಿಳಿ ಕಬಿಲನ್ – ಭರತನಾಟ್ಯ, ಶ್ರೀ ಸುದೀಪ್ ಕುಮಾರ್ ಘೋಷ್ – ಮಣಿಪುರಿ ನೃತ್ಯ ಪ್ರಸ್ತುತಗೊಳ್ಳಲಿದೆ.

ಸ್ಥಳ : ಭಾರತ್ ಸ್ಕೌಟ್ಸ್ & ಗೈಡ್ಸ್ ಸಭಾಂಗಣ, ವಸಂತನಗರ, ಬೆಂಗಳೂರು
ಸಮಯ: ಸಂಜೆ 5:00 ಗಂಟೆಯಿಂದ. ಕಾರ್ಯಕ್ರಮಕ್ಕೆ ಟಿಕೇಟುಗಳ ಮೂಲಕ ಪ್ರವೇಶ.


***** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
