ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 05 ಸೆಪ್ಟೆಂಬರ್ 2026ರಂದು ಸಂಜೆ 4-00 ಗಂಟೆಗೆ ‘ಕಾವ್ಯಾಂ ವ್ಹಾಳೊ-18’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ವಹಿಸಿಕೊಳ್ಳಲಿದ್ದಾರೆ.
ಕೊಂಕಣಿಯ ಹೆಸರಾಂತ ನಟ, ಗಾಯಕ ಹಾಗೂ ಕಾರ್ಯಕರ್ತರಾದಂತಹ ಎಮ್. ಮುರಳೀಧರ್ ಕಾಮತ್ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೊಂಕಣಿಯ ಹಿರಿಯ ಕಾರ್ಯಕರ್ತರಾಗಿರುವ ಶ್ರೀ ಜೆರಾಲ್ಡ್ ರೊಡ್ರಿಗಸ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಖ್ಯಾತ ಕವಯಿತ್ರಿಯಾದ ತಾರಾ ಲವೀನಾ ಫೆರ್ನಾಂಡಿಸ್ (ಲವಿ ಗಂಜಿಮಠ)ರವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ವಲೇರಿಯನ್ ಸಿಕ್ವೇರಾ (ವಲ್ಲಿ ಬೋಳಾ), ಶನನ್ ರೀವ್ ಕ್ರಾಸ್ತಾ, ಕೃತಿಕಾ ಕಾಮತ್, ಜೆನಿಶಾ ಶರಲ್ ರೊಡ್ರಿಗಸ್, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ವಾಯ್ಲೆಟ್ ಜೆ. ಪಿರೇರಾ, ಆಶ್ನಾ ಲೆನಾ ಪಿರೇರಾ, ಅಲೋಮಾ ಲೋಬೊ ಕಟೀಲ್, ಗೊಡ್ವಿನ್ ಪಿಂಟೊ, ಕಾಂತಾವರ ಶಿವಾನಂದ ಶೆಣೈ ಮತ್ತು ಪ್ರೀತಮ್ ಮಿಜಾರ್ ಇವರು ತಮ್ಮ ಕವಿತೆಗಳನ್ನು ವಾಚಿಸುವರು.
