Subscribe to Updates

    Get the latest creative news from FooBar about art, design and business.

    What's Hot

    ಡಾ. ವಾಮನ್ ರಾವ್ ಬೇಕಲ್ ಇವರಿಗೆ ಪ್ರತಿಷ್ಠಿತ ‘ಧ್ವನಿ ಕೊಟ್ಟ ಧಣಿ ಪ್ರಶಸ್ತಿ’ ಪ್ರದಾನ

    August 31, 2026

    ಉಡುಪಿಯಲ್ಲಿ ‘ಕಾವ್ಯ ಪ್ರಶಸ್ತಿ’ ಪ್ರದಾನ ಮತ್ತು ‘ಡುಂಡಿ 70’ ಅಭಿನಂದನಾ ಸಮಾರಂಭ | ಸೆಪ್ಟೆಂಬರ್ 06

    August 31, 2026

    ಕ.ಸಾ.ಪ.ದ ನಾಡೋಜ ಡಾ. ಮನು ಬಳಿಗಾರ್ ಗೌರವ ದತ್ತಿ ಪ್ರಶಸ್ತಿಗೆ ಸಾಹಿತಿಗಳ ಆಯ್ಕೆ

    August 31, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕೊಲ್ಯ-ಸೋಮೇಶ್ವರದಲ್ಲಿ ‘ಸಾಂಸ್ಕೃತಿಕ ಸಂಜೆ’
    Bharathanatya

    ಕೊಲ್ಯ-ಸೋಮೇಶ್ವರದಲ್ಲಿ ‘ಸಾಂಸ್ಕೃತಿಕ ಸಂಜೆ’

    August 31, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ರೋಟರಿ ಸಮುದಾಯ ದಳ ಕೊಲ್ಯ-ಸೋಮೇಶ್ವರದ ಆಶ್ರಯದಲ್ಲಿ ಹಾಗೂ ರೋಟರಿ ಕ್ಲಬ್ ಮಂಗಳೂರು ಪೂರ್ವ, ಬಿಲ್ಲವ ಸೇವಾ ಸಮಾಜ ಟ್ರಸ್ಟ್, ಯುವವಾಹಿನಿ ಕೊಲ್ಯ ಘಟಕ ಮತ್ತು ಜರ್ನಿ ಥಿಯೇಟರ್ ಮಂಗಳೂರು ಇವರ ಸಹಯೋಗದಲ್ಲಿ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮವು ದಿನಾಂಕ 29 ಆಗಸ್ಟ್ 2026ರಂದು ಕೊಲ್ಯ ಶ್ರೀ ನಾರಾಯಣಗುರು ಮಂದಿರದಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ಭರತನಾಟ್ಯ, ಪ್ರತಿಭಾ ಪುರಸ್ಕಾರ ಹಾಗೂ ಯಕ್ಷಗಾನ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕರ್ನಾಟಕ ರಾಜ್ಯೋತ್ಸವ ಮತ್ತು ಶಾಂತಲ ನಾಟ್ಯ ಪುರಸ್ಕತ ನ್ರತ್ಯ ಗುರು ಉಳ್ಳಾಲ ಶ್ರೀ ಮೊಹನ ಕುಮಾರ್ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಬಳಿಕ ಮಂಗಳೂರಿನ ನಾದ ನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಆ್ಯಂಡ್ ಕಲ್ಚರಲ್ ಟ್ರಸ್ಟಿನ ಡಾಕ್ಟರ್ ಭ್ರಮರಿ ಶಿವಪ್ರಕಾಶರ ನಿರ್ದೇಶನದಲ್ಲಿ ಕುಮಾರಿ ಚಿನ್ಮಯಿ ಕೋಟ್ಯಾನ್ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಬಳಿಕ ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮಂಗಳೂರು ಪೂರ್ವದ ಮಾಜಿ ಅಧ್ಯಕ್ಷರಾದ ರೊ. ಶ್ರೀ ಆನಂದ ಶೆಟ್ಟಿ, ರೋಟರಿ ಕ್ಲಬ್ ಮಂಗಳೂರು ಪೂರ್ವದ ಕಾರ್ಯದರ್ಶಿ ರೊ. ಪ್ರಮೋದ್ ಪ್ರಭು, ಆರ್.ಸಿ.ಸಿ. ಚೇರ್ಮನ್ ರೊ. ಶ್ರೀ ಗೋಪಾಲ ಶೆಟ್ಟಿ, ವೈಸ್ ಚೇರ್ಮನ್ ರೊ. ಜೈ ಕುಮಾರ್, ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರದ ಅಧ್ಯಕ್ಷರಾದ ಶ್ರೀ ಸೀತಾರಾಮ ಕರ್ಕೇರ, ಕಾರ್ಯದರ್ಶಿ ಶ್ರೀ ಜಯದೇವ್, ಆರ್.ಸಿ.ಸಿ. ಜಿಲ್ಲಾ ಪ್ರತಿನಿಧಿ ಶ್ರೀ ಆನಂದ್ ಎಂ. ಹಾಗೂ ಯುವ ವಾಹಿನಿ (ರಿ.) ಕೊಲ್ಯ ಘಟಕ ಇದರ ಅಧ್ಯಕ್ಷರಾದ ಶ್ರೀ ಜೀವನ್ ಕಾಸಿಂಬೆಟ್ಟು ಉಪಸ್ಥಿತರಿದ್ದರು.

    ಪ್ರತಿ ವರ್ಷ ಕೊಡಲ್ಪಡುವ ರೋಟರಿ ಸಮುದಾಯ ಪುರಸ್ಕಾರವನ್ನು ಗಣನಿಯ ಸೇವೆ ಸಲ್ಲಿಸಿದ ಶ್ರೀ ರಕ್ಷಿತ್ ಜೆ. ಮತ್ತು ಡಾ. ಅನ್ವಿತಾ ಎ. ಇವರಿಗೆ ನೀಡಲಾಯಿತು. ರೋಟರಿ ಪ್ರತಿಭಾ ಪುರಸ್ಕಾರವನ್ನು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಮಾರಿ ತನ್ವಿ ಕೆ.ಎಮ್., ಕುಮಾರಿ ಸಾನ್ವಿ ಕೆ.ಜೆ., ಕುಮಾರಿ ಉನ್ನತಿ ಎಸ್., ಅಮಿತ್ ಎಸ್. ಇವರಿಗೆ ನೀಡಲಾಯಿತು. ಬಳಿಕ ಮಂಗಳೂರಿನ ಜರ್ನಿ ಥೀಯೇಟರ್ ತಂಡದಿಂದ ಶ್ರೀ ಸುನಿಲ್ ಪಲ್ಲಮಜಲು ನಿರ್ದೇಶನದಲ್ಲಿ ‘ರಾಮಾಂಜನೇಯ ಕಾಳಗ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ರೋಟರಿ ಸಮುದಾಯದ ದಳದ ಜತೆ ಕಾರ್ಯದರ್ಶಿ ಶ್ರೀ ಕುಸುಮಾಕರ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.

    baikady bharatanatyam Cultural dance felicitation Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀಧರ ಬಳಗಾರ ಇವರ ‘ಬಲಿಪಾದ’ ಕಾದಂಬರಿ ಲೋಕಾರ್ಪಣೆ
    Next Article ‘ಕಾವ್ಯಾಂ ವ್ಹಾಳೊ- 18’ ಕೊಂಕಣಿ ಕವಿಗೋಷ್ಠಿ | ಸೆಪ್ಟೆಂಬರ್ 05
    roovari

    Add Comment Cancel Reply


    Related Posts

    ಡಾ. ವಾಮನ್ ರಾವ್ ಬೇಕಲ್ ಇವರಿಗೆ ಪ್ರತಿಷ್ಠಿತ ‘ಧ್ವನಿ ಕೊಟ್ಟ ಧಣಿ ಪ್ರಶಸ್ತಿ’ ಪ್ರದಾನ

    August 31, 2026

    ಉಡುಪಿಯಲ್ಲಿ ‘ಕಾವ್ಯ ಪ್ರಶಸ್ತಿ’ ಪ್ರದಾನ ಮತ್ತು ‘ಡುಂಡಿ 70’ ಅಭಿನಂದನಾ ಸಮಾರಂಭ | ಸೆಪ್ಟೆಂಬರ್ 06

    August 31, 2026

    ಕ.ಸಾ.ಪ.ದ ನಾಡೋಜ ಡಾ. ಮನು ಬಳಿಗಾರ್ ಗೌರವ ದತ್ತಿ ಪ್ರಶಸ್ತಿಗೆ ಸಾಹಿತಿಗಳ ಆಯ್ಕೆ

    August 31, 2026

    ಅಭಿನಯ ಭಾರತಿ ಧಾರವಾಡ ‘ವಜ್ರಸಿರಿ ರಂಗೋತ್ಸವ’

    August 31, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.