ಮಂಗಳೂರು : ಸೌರಭ ಸಂಗೀತ ನೃತ್ಯ ಕಲಾ ಪರಿಷತ್ (ರಿ.) ಪ್ರಸ್ತುತ ಪಡಿಸುವ ಗುರು ವಿದುಷಿ ಶ್ರೀವಿದ್ಯಾ ಇವರ ಶಿಷ್ಯೆ ಕುಮಾರಿ ಶ್ರಾವ್ಯ ಬಿ.ಎಸ್. ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ದಿನಾಂಕ 23 ಅಕ್ಟೋಬರ್ 2026ರಂದು ಸಂಜೆ ಗಂಟೆ 5-30ಕ್ಕೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ.
‘ಕರ್ನಾಟಕ ಕಲಾ ತಿಲಕ’ ಮತ್ತು ‘ಶಾಂತಲಾ ನಾಟ್ಯ ಪ್ರಶಸ್ತಿ’ ಪುರಸ್ಕೃತ ನೃತ್ಯ ಗುರು ನಾಟ್ಯಾಚಾರ್ಯ ಶ್ರೀ ಉಳ್ಳಾಲ ಮೋಹನ್ ಕುಮಾರ್ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಇವರ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನೃತ್ಯ ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟ್ಟುವಾಂಗದಲ್ಲಿ ವಿದುಷಿ ಶ್ರೀವಿದ್ಯಾ, ಹಾಡುಗಾರಿಕೆ ಕರ್ನಾಟಕ ಕಲಾಶ್ರೀ ವಿದ್ವಾನ್ ಬಾಲಸುಬ್ರಮಣ್ಯ ಶರ್ಮ, ಮೃದಂಗ ವಾದನ ವಿದ್ವಾನ್ ಕೆ.ಎಸ್. ಭವಾನಿ ಶಂಕರ್, ಕೊಳಲುವಾದನ ವಿದ್ವಾನ್ ನಿತೀಶ್ ಅಮ್ಮಣ್ಣಾಯ ಮತ್ತು ರಿದಂ ಪ್ಯಾಡ್ ವಿದ್ವಾನ್ ಲಕ್ಷ್ಮಿನಾರಾಯಣ ಜಿ. ಭಾಗವಹಿಸಲಿದ್ದಾರೆ. ಕಲಾಭಿಮಾನಿಗಳಿಗೆ ಹಾರ್ದಿಕ ಸ್ವಾಗತ ಕೋರಲಾಗಿದೆ.

