Subscribe to Updates

    Get the latest creative news from FooBar about art, design and business.

    What's Hot

    ರಾಜ್ಯ ಮಟ್ಟದ ಸಿಮೆಂಟ್‌ ಶಿಲ್ಪಕಲಾ ಶಿಬಿರ ಸಮಾರೋಪ ಸಮಾರಂಭ

    June 27, 2026

    ತೊಕ್ಕೊಟ್ಟು ಅಂಬಾವನ ಧರ್ಮ ಶಿಕ್ಷಣ ಕೇಂದ್ರದಲ್ಲಿ ‘ಏಕದಿನ ಸಾಹಿತ್ಯ ಅಭಿಯಾನ’ | ಜೂನ್ 28

    June 27, 2026

    ಕೊಂಕಣಿ ಕವಿತಾ ವಾಚನ ಹಾಗೂ ಕವಿತೆಯ ರಚನಾ ಬಗ್ಗೆ ಮಾಹಿತಿ ಕಾರ್ಯಾಗಾರ

    June 27, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮಂಗಳೂರು ವಿವಿ ‘ಸಂಭ್ರಮ 2022-23’ ಉದ್ಘಾಟನೆ
    Competition

    ಮಂಗಳೂರು ವಿವಿ ‘ಸಂಭ್ರಮ 2022-23’ ಉದ್ಘಾಟನೆ

    July 26, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮುಡಿಪು : ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಆಶ್ರಯದಲ್ಲಿ ‘ಸಂಭ್ರಮ-2023’ ಸಾಂಸ್ಕೃತಿಕ ಸ್ಪರ್ಧೆಯು ದಿನಾಂಕ 17-07-2023 ಸೋಮವಾರ ಉದ್ಘಾಟನೆಗೊಂಡು 18 ಮತ್ತು 19-07-2023ರಂದು ಮೂರು ದಿನಗಳ ಕಾಲ ನಡೆಯಿತು.

    ಈ ಕಾರ್ಯಕ್ರಮವನ್ನು ಮಂಗಳಾ ಸಭಾಂಗಣದಲ್ಲಿ ಸಮಾಜ ಸೇವಕ ರವಿ ಕಟಪಾಡಿ ಅವರು ಉದ್ಘಾಟಿಸಿ ಮಾತನಾಡುತ್ತಾ “ಕಾಲ ಬದಲಾದರೂ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯದೆ ಸಂಸ್ಕಾರದ ಮೌಲ್ಯವನ್ನು ಅರಿತುಕೊಂಡು ನಾವು ಮುನ್ನಡೆಯಬೇಕು. ನಾವು ಯಾವುದೇ ಸಾಧನೆ ಮಾಡಿದರೂ ನಮ್ಮ ತಂದೆ ತಾಯಿಗೆ ಕೊಡುವ ಗೌರವದ ಮೌಲ್ಯ ನಮಗೆ ತಿಳಿದಿರಬೇಕು. ಇಂದಿನ ಆಧುನಿಕ ಯುಗದಲ್ಲಿ ಸಾಧನೆಗೆ ಬಹಳಷ್ಟು ಮಾರ್ಗಗಳಿದ್ದು ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಬದುಕನ್ನು ಕಂಡುಕೊಳ್ಳಬೇಕು” ಎಂದು ಹೇಳಿದರು.

    ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಲಪತಿ ಪ್ರೊ. ಜಯರಾಜ್ ಅಮೀನ್‌ ಅವರು ಮಾತನಾಡಿ, “ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು” ಎಂದರು.

    ರಾಷ್ಟ್ರಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಜಯಗಳಿಸಿದ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಗೋವಿಂದ ದಾಸ ಕಾಲೇಜು ಮತ್ತು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

    ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಡಾ. ಪರಮೇಶ್ವರ ಅವರು ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಅವರು ವಂದಿಸಿ, ಪ್ರಗತಿ ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಶನೀಶ್ವರ ಯಕ್ಷಗಾನದ ಶ್ರೀ ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು ಅವರಿಗೆ ‘ಗುರುದೇವ ಕಲಾ ಪ್ರಶಸ್ತಿ’
    Next Article ‘ಪುಣ್ಯಕ್ಷೇತ್ರ ಬೀಬೀಲಚ್ಚಿಲ್’ ಭಕ್ತಿಗೀತೆಗಳ ಬಿಡುಗಡೆ
    roovari

    Add Comment Cancel Reply


    Related Posts

    ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ಪ್ರದಾನ ಸಮಾರಂಭ | ಜೂನ್ 28

    June 25, 2026

    ಸೋಮೇಶ್ವರದಲ್ಲಿ ‘ದಿ. ಅಮೃತ ಸೋಮೇಶ್ವರ ಸಂಸ್ಮರಣಾ’ ಕಾರ್ಯಕ್ರಮ | ಜೂನ್ 27

    June 25, 2026

    ಕಥಾ ಸ್ಪರ್ಧೆಗೆ ಕಥೆಗಳಿಗೆ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 15

    June 24, 2026

    ರಾಜ್ಯ ಮಟ್ಟದ ಕಥೆ, ಕವನ ಆನ್ಲೈನ್ ಸ್ಪರ್ಧೆ | ಕೊನಯೆ ದಿನಾಂಕ ಜುಲೈ 05

    June 20, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.