Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ರಂಗರಥ ವತಿಯಿಂದ ‘ಅಭಿನಯ ಕಾರ್ಯಾಗಾರ’ | ಜೂನ್ 13ರಿಂದ

    June 11, 2026

    ವಿಪ್ರ ವೇದಿಕೆಯ ಸಭಾಂಗಣದಲ್ಲಿ ತಿಂಗಳ ಕಾರ್ಯಕ್ರಮ

    June 11, 2026

    ಮೇಘಮೈತ್ರಿ ಸಮ್ಮೇಳನ ಸವಿನೆನಪಿನ ದತ್ತಿ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ಜುಲೈ 07

    June 11, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ವಿಪ್ರ ವೇದಿಕೆಯ ಸಭಾಂಗಣದಲ್ಲಿ ತಿಂಗಳ ಕಾರ್ಯಕ್ರಮ
    Literature

    ವಿಪ್ರ ವೇದಿಕೆಯ ಸಭಾಂಗಣದಲ್ಲಿ ತಿಂಗಳ ಕಾರ್ಯಕ್ರಮ

    June 11, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕೋಡಿಕಲ್ ನ ವಿಪ್ರ ವೇದಿಕೆ (ರಿ.) ಇದರ ತಿಂಗಳ ಕಾರ್ಯಕ್ರಮವು 07 ಜೂನ್ 2026ರಂದು ವಿಪ್ರ ವೇದಿಕೆಯ ಸಭಾಂಗಣದಲ್ಲಿ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಚಿಂತನಕಾರರಾಗಿ ಭಾಗವಹಿಸಿದ ನಿವೃತ್ತ ಅಧ್ಯಾಪಕ, ಧಾರ್ಮಿಕ ಚಿಂತಕ ಡಾ. ವಾಗೀಶ್ವರೀ ಶಿವರಾಂರವರು “ಪುರಾಣ ಜಗತ್ತು ಆಳ ಸಮುದ್ರದಂತೆ ಬಗೆದಷ್ಟು ಮುತ್ತು – ರತ್ನಗಳು – ಸ್ಪಟಿಕ ಮಣಿಗಳು ದೊರೆಯುತ್ತವೆ. ಅಲ್ಲಿ ಕಾಣಸಿಗುವ ಬಾಲಕರ ಬದುಕು ಸಾಹಸಮಯದ್ದಾಗಿದ್ದು ನಮಗೂ ಪ್ರೇರಣೆಯನ್ನು ನೀಡುತ್ತದೆ. ಬೇರೆ ಬೇರೆ ಪುರಾಣಗಳು ಹೇರಳ ಜ್ಞಾನವನ್ನು ಒದಗಿಸುತ್ತವೆ. ನಚಿಕೇತನಿಂದಾಗಿ ನಚಿಕೇತೋಪಖ್ಯಾನವೇ ಸೃಷ್ಠಿಯಾಯಿತು. ಚಕ್ರವ್ಯೂಹವನ್ನೇ ಬೇಧಿಸಿದ ಅಭಿಮನ್ಯು, ಬಾಲಕ ಶ್ರವಣ ಕುಮಾರ ಹೀಗೆ ಈ ಬಾಲಕರು ಸಾಹಸಮಯ ಜಗತ್ತನ್ನೇ ತೆರೆದಿಡುತ್ತಾರೆ. ತಾಯಂದಿರು ತಮ್ಮ ಕಂದಮ್ಮಗಳನ್ನು ಈ ರೂಪದಲ್ಲಿ ಕಾಣಬಯಸುತ್ತಾರೆ. ವಿಪ್ರ ವೇದಿಕೆಯಲ್ಲಿ ಈ ಆಧ್ಯಾತ್ಮ ಬಾಲಕರು ಹಾದು ಹೋದದ್ದು ಮನನೀಯ” ಎಂದು ಹೇಳಿದರು.

    ಶ್ರೀಮತಿ ವಿದ್ಯಾ ಗಣೇಶ್ ರಾವ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕಥೆಗಾರರಾಗಿ ವೇದಮೂರ್ತಿ ವಿಶ್ವಕುಮಾರ ಜೋಯಿಸರು (ಭಕ್ತ ಮಾರ್ಕಂಡೇಯ), ಶ್ರೀಮತಿ ಸುರೇಖಾ ಶ್ರೀಹರಿ (ಪ್ರಹ್ಲಾದ), ಶ್ರೀಮತಿ ಅಪರ್ಣಾ ಉಪಾಧ್ಯಾಯ (ಭಕ್ತ ಧ್ರುವ) ಭಾಗವಹಿಸಿದ್ದರು. ಶ್ರೀ ಗಣೇಶ್ ರಾವ್ ರವರು ಧನ್ಯವಾದವಿತ್ತರು. ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯ ಕಥಾ ಉಪಸಂಹಾರ ಮಾಡಿದರು. ಗೌರವಾಧ್ಯಕ್ಷ ಜಯರಾಮ ಪದಕಣ್ಣಾಯರು ಪ್ರಾಯೋಜಕರಾದ ಶ್ರೀಮತಿ ವಿನೋದಾ ಶಾಸ್ತ್ರೀಯವರನ್ನು ಅಭಿನಂದಿಸಿದರು. ಕೋಶಾಧ್ಯಕ್ಷ ಕಿಶೋರ್ ಕೃಷ್ಣರವರು ಕಥೆಗಾರರನ್ನು ಗೌರವಿಸಿದರು.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಮೇಘಮೈತ್ರಿ ಸಮ್ಮೇಳನ ಸವಿನೆನಪಿನ ದತ್ತಿ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ಜುಲೈ 07
    Next Article ಬೆಂಗಳೂರಿನಲ್ಲಿ ರಂಗರಥ ವತಿಯಿಂದ ‘ಅಭಿನಯ ಕಾರ್ಯಾಗಾರ’ | ಜೂನ್ 13ರಿಂದ
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ರಂಗರಥ ವತಿಯಿಂದ ‘ಅಭಿನಯ ಕಾರ್ಯಾಗಾರ’ | ಜೂನ್ 13ರಿಂದ

    June 11, 2026

    ಮೇಘಮೈತ್ರಿ ಸಮ್ಮೇಳನ ಸವಿನೆನಪಿನ ದತ್ತಿ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ಜುಲೈ 07

    June 11, 2026

    ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಅರ್ಥಾಂಕುರ-20’ ಸರಣಿ ತಾಳಮದ್ದಳೆ

    June 11, 2026

    ಕೃತಿ ವಿಮರ್ಶೆ | ಸಾಧನೆಗೆ ಉತ್ಸಾಹ ತುಂಬುವ ಕೃತಿ ‘ಸ್ವರ ಸೃಷ್ಠಿ’

    June 11, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.