ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ತಾಳಮದ್ದಲೆ ಕೂಟ ‘ಶಿವಭಕ್ತ ವೀರಮಣಿ’ ಎಂಬ ಆಖ್ಯಾನದೊಂದಿಗೆ ದಿನಾಂಕ 06 ಏಪ್ರಿಲ್ 2026ನೇ ಸೋಮವಾರ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್ ಹಾಗೂ ಚೆಂಡೆ ಮದ್ದಲೆಗಳಲ್ಲಿ ಅನೀಶ ಕೃಷ್ಣ ಪುಣಚ, ಸಮರ್ಥ ವಿಷ್ಣು ಕಡಂಬಳಿಕೆ ಭಾಗವಹಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ವೀರಮಣಿ), ಗುಡ್ಡಪ್ಪ ಬಲ್ಯ (ಹನುಮಂತ), ದುಗ್ಗಪ್ಪ ನಡುಗಲ್ಲು (ಈಶ್ವರ), ಕಿಶೋರಿ ದುಗ್ಗಪ್ಪ ನಡುಗಲ್ಲು (ಶತ್ರುಘ್ನ ಮತ್ತು ಶ್ರೀ ರಾಮ) ಪಾತ್ರಪೋಷಣೆ ಮಾಡಿದರು. ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ಗೌರವ ಕಾರ್ಯದರ್ಶಿ ರಂಗನಾಥ ರಾವ್ ವಂದಿಸಿದರು.
