Subscribe to Updates

    Get the latest creative news from FooBar about art, design and business.

    What's Hot

    ಬ್ರಹ್ಮಾವರ ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ | ಅಕ್ಟೋಬರ್ 04

    October 2, 2026

    ಮುಂಬಯಿ ಬಂಟರ ಭವನದಲ್ಲಿ ‘ಮುಂಬಯಿ ಯಕ್ಷಗಾನ ಸಮ್ಮೇಳನ 2026’ | ಅಕ್ಟೋಬರ್ 03 ಮತ್ತು 04

    October 2, 2026

    ಮೈಸೂರಿನ ಕಿರು ರಂಗಮಂದಿರದಲ್ಲಿ ‘ಸಹಜರಂಗೋತ್ಸವ’ | ಅಕ್ಟೋಬರ್ 03

    October 2, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮುಂಬಯಿ ಬಂಟರ ಭವನದಲ್ಲಿ ‘ಮುಂಬಯಿ ಯಕ್ಷಗಾನ ಸಮ್ಮೇಳನ 2026’ | ಅಕ್ಟೋಬರ್ 03 ಮತ್ತು 04
    Awards

    ಮುಂಬಯಿ ಬಂಟರ ಭವನದಲ್ಲಿ ‘ಮುಂಬಯಿ ಯಕ್ಷಗಾನ ಸಮ್ಮೇಳನ 2026’ | ಅಕ್ಟೋಬರ್ 03 ಮತ್ತು 04

    October 2, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮುಂಬಯಿ : ಅಜೆಕಾರು ಕಲಾಭಿಮಾನಿ ಬಳಗ (ರಿ.) ಮುಂಬಯಿ ಇದರ ರಜತ ಪರ್ವ ಸಮಾರಂಭದ ಅಂಗವಾಗಿ ‘ಮುಂಬಯಿ ಯಕ್ಷಗಾನ ಸಮ್ಮೇಳನ-2026’ವನ್ನು ದಿನಾಂಕ 03 ಮತ್ತು 04 ಅಕ್ಟೋಬರ್ 2026ರಂದು ಮುಂಬಯಿ ಕುರ್ಲಾ ಪೂರ್ವದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಬಂಟರ ಭವನದ ದಿ. ಕಲ್ಲಾಡಿ ವಿಠಲ ಶೆಟ್ಟಿ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

    ದಿನಾಂಕ 03 ಅಕ್ಟೋಬರ್ 2026ರಂದು ಬೆಳಗ್ಗೆ ಗಂಟೆ 9-00ಕ್ಕೆ ಯಕ್ಷ ಗಾಯನ, 9-30 ಗಂಟೆಗೆ ಸಾಂಸ್ಕೃತಿಕ ಮೆರವಣಿಗೆ ಮತ್ತು 10-00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಯಕ್ಷಗಾನ ಕಲಾಪೋಷಕ ಡಾ. ಟಿ. ಶ್ಯಾಮ ಭಟ್ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಸವಿ ಸಂಪುಟ ‘ಯಕ್ಷಗಾನ ಮುಂಬೆಳಗು’ ಗ್ರಂಥವನ್ನು ಹೇರಂಬ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ಡಾ. ಕನ್ಯಾನ ಸದಾಶಿವ ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ. ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ನಾನಾ ಸಮಾಜಗಳ ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಗಂಟೆಗೆ 12-15ಕ್ಕೆ ಥಿಯೇಟರ್ ಯಕ್ಷ (ರಿ.) ಇವರಿಂದ ‘ಯಕ್ಷಪ್ರಯೋಗ’ ಸಂಕ್ಷಿಪ್ತ ಪೂರ್ವರಂಗ ಮತ್ತು ಪಂಪಾತೀರ ಕಥಾನಕ ಪ್ರಸ್ತುತಿ, 12-50 ಗಂಟೆಗೆ ಗೋಷ್ಠಿ 1ರಲ್ಲಿ ‘ಮುಂಬಯಿ ಯಕ್ಷಗಾನ ಒಂದು ಅವಲೋಕನ, ಮಧ್ಯಾಹ್ನ 1-30 ಗಂಟೆಗೆ ಯಕ್ಷಗಾನ ನಾಟ್ಯ ಮಂಜರಿ, 2-00 ಗಂಟೆಗೆ ಗೋಷ್ಠಿ 2ರಲ್ಲಿ ‘ಮಹಿಳಾ ಮತ್ತು ಮಕ್ಕಳ ಯಕ್ಷಗಾನ’, 2-50 ಗಂಟೆಗೆ ‘ಬೀರ ಸಿರಿತ ಗಾಂಡೀವಿ’ ತುಳು ಯಕ್ಷಗಾನ ತಾಳಮದ್ದಲೆ, 5-00 ಗಂಟೆಗೆ ಗೋಷ್ಠಿ 3ರಲ್ಲಿ ‘ಅರ್ಥ ಗಾರಿಕೆ : ಸ್ವರೂಪ ಮತ್ತು ವಿಸ್ತರಣೆ’, 6-00 ಗಂಟೆಗೆ ಅಭಿವಂದನ, ರಜತ ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಸಂಭ್ರಮ ಹಾಗೂ ಸಂಜೆ 7-30 ಗಂಟೆಗೆ ಯಕ್ಷ ಸಂಜೀವ ಯಕ್ಷಗಾನ ಕೇಂದ್ರ (ರಿ.) ಉಡುಪಿ ಇವರಿಂದ ‘ಚಕ್ರವ್ಯೂಹ’ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ.

    ದಿನಾಂಕ 04 ಅಕ್ಟೋಬರ್ 2026ರಂದು ಬೆಳಗ್ಗೆ ಗಂಟೆ 9-00ಕ್ಕೆ ಯಕ್ಷಗಾನ ಗೊಂಬೆಯಾಟ ಪ್ರದರ್ಶನ, 9-45 ಗಂಟೆಗೆ ಯಕ್ಷಗಾನ ಕವಿಸಮಯ, 10-30 ಗಂಟೆಗೆ ಅಭಿವಂದನ, ರಜತ ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಸಂಭ್ರಮ, 12-00 ಗಂಟೆಗೆ ಗೋಷ್ಠಿ 4ರಲ್ಲಿ ‘ತುಳುನಾಡಿನ ಆರಾಧನಾ ಕಲೆಗಳು : ಯಕ್ಷಾರಾಧನೆ, ನಾಗಾರಾಧನೆ ದೈವಾರಾಧನೆ’, ಮಧ್ಯಾಹ್ನ 1-45 ಗಂಟೆಗೆ ಸಂಸ್ಮರಣೆ, 2-30 ಗಂಟೆಗೆ ಗೋಷ್ಠಿ 5ರಲ್ಲಿ ಗ್ರಂಥ ಬಾಗಿನ, 3-30 ಗಂಟೆಗೆ ಗೋಷ್ಠಿ 6ರಲ್ಲಿ ‘ಯಕ್ಷಗಾನ ಹಾಸ್ಯ : ಅನ್ವಯ ಮತ್ತು ಪ್ರದರ್ಶನ, ಸಂಜೆ 5-00 ಗಂಟೆಗೆ ಯಕ್ಷ ಕಲಾ ಸಂವರ್ಧನೆಯಲ್ಲಿ ‘ಯಕ್ಷಗಾನ ಸಂಘಟನೆ ಮತ್ತು ಕಲಾವಿದರ ಕ್ಷೇಮಚಿಂತನೆ, 6-00 ಗಂಟೆಗೆ ಸಮಾರೋಪ ಸಮಾರಂಭ ಮತ್ತು ‘ರುಕ್ಮಿಣಿ ಕಲ್ಯಾಣ’ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಸಮ್ಮೇಳನದ ಅವಲೋಕನ ನಡೆಸಲಿದ್ದಾರೆ. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಮ್ಮೇಳನಾಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಅವರನ್ನು ಸನ್ಮಾನಿಸಲಾಗುವುದು. ಸಮ್ಮೇಳನದಲ್ಲಿ ಆಯೋಜಿಸಲಾದ ವಿಚಾರಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿದ್ವಾಂಸರು ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ. ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಹಾಗೂ ಸಂಘಟಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ.

    award baikady dance felicitation Literature Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಮೈಸೂರಿನ ಕಿರು ರಂಗಮಂದಿರದಲ್ಲಿ ‘ಸಹಜರಂಗೋತ್ಸವ’ | ಅಕ್ಟೋಬರ್ 03
    Next Article ಬ್ರಹ್ಮಾವರ ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ | ಅಕ್ಟೋಬರ್ 04
    roovari

    Add Comment Cancel Reply


    Related Posts

    ಬ್ರಹ್ಮಾವರ ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ | ಅಕ್ಟೋಬರ್ 04

    October 2, 2026

    ಮೈಸೂರಿನ ಕಿರು ರಂಗಮಂದಿರದಲ್ಲಿ ‘ಸಹಜರಂಗೋತ್ಸವ’ | ಅಕ್ಟೋಬರ್ 03

    October 2, 2026

    ವ್ಯಕ್ತಿ ಪರಿಚಯ | ‘ಯಕ್ಷ ಹರಿಣಿ’ ಹರಿಣಿ ಕೆಂಜಾರ್

    October 2, 2026

    ‘ಕಲಾಧರ ಶ್ರೇಷ್ಠತಾ ಸನ್ಮಾನ’ಕ್ಕೆ ಡಾ. ವಾದಿರಾಜ ಕಲ್ಲೂರಾಯ ಆಯ್ಕೆ

    October 2, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.