ಮೈಸೂರು : ನಿರಂತರ ಫೌಂಡೇಶನ್ (ರಿ.) ಮೈಸೂರು ಮತ್ತು ಟೆರೇಷಿಯನ್ ಕಾಲೇಜು ಮೈಸೂರು ಇವರ ಸಹಯೋದದೊಂದಿಗೆ ಆಯೋಜಿಸಿರುವ ಸಹಜರಂಗೋತ್ಸವ ಶಿಬಿರಾರ್ಥಿಗಳ ನಾಟಕೋತ್ಸವವನ್ನು ದಿನಾಂಕ 03 ಅಕ್ಟೋಬರ್ 2026ರಂದು ಸಂಜೆ ಗಂಟೆ 6-30ಕ್ಕೆ ಮೈಸೂರಿನ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಪಿ. ಗಂಗಾಧರ ಸ್ವಾಮಿ ಹಾಗೂ ಇಂದಿರಾ ನಾಯರ್ ಇವರಿಗೆ ಅರ್ಪಣೆಗೈಯುವ ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರೇವ್. ಡಾ. ಸಿಸ್ಟರ್ ರೋಹಿಣಿ, ಐ.ಕ್ಯೂ.ಎ.ಸಿ. ಸಂಚಾಲಕರಾದ ವಿವೇಕ್ ಚಾರ್ಲ್ಸ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಚೇತನ್ ಎಂ., ರಂಗ ನಿರ್ದೇಶಕರಾದ ಅರಸೀಕೆರೆ ಯೋಗಾನಂದ್ ಮತ್ತು ನಿರಂತರದ ಶ್ರೀನಿವಾಸ್ ಪಾಲಹಳ್ಳಿ ಭಾಗವಹಿಸಲಿದ್ದಾರೆ.
ಮೈಸೂರಿನ ಟೆರೇಷಿಯನ್ ಕಾಲೇಜಿನ ವಿದ್ಯಾರ್ಥಿಗಳು ವಿಲಿಯಂ ಷೇಕ್ಸ್ ಪಿಯರ್ ನ ‘ಎ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್’ ನಾಟಕವನ್ನು ಅರಸೀಕೆರೆ ಯೋಗನಂದ ಇವರ ನಿರ್ದೇಶನದಲ್ಲಿ ಅಭಿನಯಿಸಲಿದ್ದಾರೆ.

