ಬೆಂಗಳೂರು : ಕಾಜಾಣ ಪ್ರಸ್ತುತ ಪಡಿಸುವ ಎನ್. ಲಿಂಗಯ್ಯ ಇವರ ನಾಗಸಂಪಿಗೆ ಕೃತಿ ಆಧಾರಿತ ಲಿಂಗೇಗೌಡ ಇವರ ಜೀವನಾಧಾರಿತ ‘ನಾಗಸಂಪಿಗೆ’ ನಾಟಕ ಪ್ರದರ್ಶನವನ್ನು ದಿನಾಂಕ 30 ಏಪ್ರಿಲ್ 2026ರಂದು ಸಂಜೆ ಗಂಟೆ 4-00ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿ ನಾಗರಭಾವಿ, 2ನೇ ಸ್ಟೇಜ್, ಎನ್.ಜಿ.ಇ.ಎಫ್. ಲೇಔಟ್ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಅರುಣ್ ಕುಮಾರ್ ಏಕವ್ಯಕ್ತಿ ಅಭಿನಯದ ನಾಟಕವನ್ನು ಡಾ. ಬೇಲೂರು ರಘುನಂದನ್ ರಂಗಪಠ್ಯ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನ ಮಾಡಿರುತ್ತಾರೆ.

