ಮಂಗಳೂರು : ರಾಮಕೃಷ್ಣ ಮಿಷನ್ ಮಂಗಳೂರು ವತಿಯಿಂದ ಅಮೃತ ವರ್ಷೋತ್ಸವದ ಅಂಗವಾಗಿ ಆಯೋಜಿಸಲಾದ ವಿಶೇಷ ಭಕ್ತಿ ಸಂಗೀತ ಕಾರ್ಯಕ್ರಮ ‘ರಾಗ ಸಂಧ್ಯಾ’ವು ದಿನಾಂಕ 19 ಏಪ್ರಿಲ್ 2026ರಂದು ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಮಾಜಿ ಸಚಿವರಾದ ಶ್ರೀ ಜೆ. ಕೃಷ್ಣ ಪಾಲೆಮಾರ್ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದ ಜಿ ಇವರು ವಹಿಸಿದ್ದರು. ಖ್ಯಾತ ಗಾಯಕ ಶ್ರೀ ಸಿದ್ಧಾರ್ಥ ಬೆಳ್ಮಣ್ಣು ಇವರ ಮನಮೋಹಕ ಗಾಯನವು ಶ್ರೋತೃಗಳನ್ನು ಭಕ್ತಿರಸದೊಳಗೆ ಮುಳುಗಿಸಿತು. ತಬಲದಲ್ಲಿ ಶ್ರೀ ಮಾಯಾಂಕ್ ಬೇಡೆಕರ್ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ ಪ್ರಸಾದ್ ಕಾಮತ್ ಇವರು ಸಹವಾದ್ಯ ನೀಡಿದರು. ಭಕ್ತಿ ಮತ್ತು ಸಂಗೀತದ ಸುಂದರ ಸಂಯೋಜನೆಯಾಗಿ ಕಾರ್ಯಕ್ರಮವು ಶ್ರೋತೃಗಳಿಗೆ ಆಧ್ಯಾತ್ಮಿಕ ಆನಂದವನ್ನು ನೀಡಿತು. ಸಂಗೀತಾಸಕ್ತರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



