ಉಡುಪಿ : ರಾಗ ಧನ ಉಡುಪಿ (ರಿ) ಸಂಸ್ಥೆಯ ವಾರ್ಷಿಕ ಮಹಾಸಭೆ ಹಾಗೂ ವಿದ್ವಾನ್ ದಿ. ಕೆ.ಯು. ರಾಘವೇಂದ್ರ ರಾವ್ ಇವರಿಗೆ ನುಡಿ ನಮನ ಮತ್ತು ರಾಗರತ್ನ ಮಾಲಿಕೆ- 49 ಸರಣಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ದಿನಾಂಕ 31 ಮೇ 2026ನೇ ಭಾನುವಾರ ಅಪರಾಹ್ನ 3-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಅಪರಾಹ್ನ 3-00 ಗಂಟೆಗೆ ಸಂಸ್ಥೆಯ ವಾರ್ಷಿಕ ಮಹಾಸಭೆ, ಸಂಜೆ ಗಂಟೆ 4-00ರಿಂದ ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಸಂಗೀತ ಗುರು ಹಾಗೂ ಕೊಳಲು ವಿದ್ವಾನ್ ಕೆ.ಯು. ರಾಘವೇಂದ್ರ ರಾಯರಿಗೆ ನುಡಿ ಸಂಗೀತ ನಮನ, ನಂತರ ಶ್ರೀ ಹೇರಂಭ್ ಹಾಗೂ ಶ್ರೀ ಹೇಮಂತ್ ಅವರ ದ್ವಂದ್ವ ಕೊಳಲು ವಾದನ ಕಛೇರಿ ನಡೆಯಲಿದೆ. ಇವರಿಗೆ ಶ್ರೀ ಕೆ.ಯು. ಜಯಚಂದ್ರ ರಾವ್ ಮೃದಂಗದಲ್ಲಿ ಹಾಗೂ ಶ್ರೀ ವಾಳಪ್ಪಳ್ಳಿ ಕೃಷ್ಣ ಕುಮಾರ್ ಘಟಂನಲ್ಲಿ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ.

